Politics

ಸತೀಶ್‌ ಜಾರಕಿಹೊಳಿ-ಹೆಚ್ಡಿಕೆ ರಹಸ್ಯ ಭೇಟಿ; ದೆಹಲಿಯಲ್ಲಿ ಆ 1 ಗಂಟೆ ಮೀಟಿಂಗ್‌ ರಹಸ್ಯವೇನು..?

ಬೆಂಗಳೂರು; ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂಗಳ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗಿನ ಜೊತೆಗೆ ಸಿಎಂ ಬದಲಾವಣೆಯ ಮಾತೂ ಕೇಳಿ ಬರುತ್ತಿದೆ.. ಈ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಚಿವ ಸತೀಸ್‌ ಜಾರಕಿಹೊಳಿಯವರು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ.. ದೆಹಲಿಯಲ್ಲಿ ಉಭಯ ನಾಯಕರೂ ಭೇಟಿಯಾಗಿದ್ದು, ಒಂದು ಗಂಟೆ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.. ಇದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ..
ಸತೀಶ್‌ ಜಾರಕಿಹೊಳಿಯವರು ಸೇರಿದಂತೆ ಹಲವು ನಾಯಕರು ಹೆಚ್ಚುವರಿ ಡಿಸಿಎಂಗಳ ನೇಮಕಕ್ಕೆ ಆಗ್ರಹಿಸುತ್ತಿದ್ದಾರೆ.. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಸತೀಶ್‌ ಜಾರಕಿಹೊಳಿ ಕಣ್ಣಿಟ್ಟಿದ್ದಾರೆ.. ಸತೀಶ್‌ ಜಾರಕಿಹೊಳಿಯವರು ಸಿಎಂ ಸಿದ್ದರಾಮಯ್ಯ ಅವರ ಪರವಾಗಿದ್ದು, ಸಿಎಂ ಬದಲಾವಣೆಗೆ ಅವರ ವಿರೋಧವಿದೆ.. ಒಂದು ವೇಳೆ ಸಿಎಂ ಸ್ಥಾನ ಬದಲಾಯಿಸಿದರೆ ಸತೀಶ್ ಜಾರಕಿಹೊಳಿ ಅಂಡ್‌ ಟೀಂ ರೆಬೆಲ್‌ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ.. ಮಹಾರಾಷ್ಟ್ರದ ಏಕನಾಥ್‌ ಶಿಂಧೆ ತರಾ ಸತೀಶ್‌ ಜಾರಕಿಹೊಳಿ ಕೂಡಾ ರೆಬೆಲ್‌ ಆಗ್ತಾರಾ ಎಂಬ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ..
ಒಂದು ಹೆಚ್ಚುವರಿ ಡಿಸಿಎಂ ಹುದ್ದೆಗಳ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ, ಸಿಎಂ ವಿರುದ್ಧ ಮೂಡಾ ಹಗರಣದ ಆರೋಪ ಕೇಳಿಬಂದಿದೆ.. ಇದು ಕಾಂಗ್ರೆಸ್‌ ನಾಯಕರೇ ಹುಟ್ಟು ಹಾಕಿರುವ ವಿವಾದ ಎಂಬಂತೆ ಎರಡೂ ಕಡೆಯವರು ಮಾತನಾಡುತ್ತಿದ್ದಾರೆ.. ಹೀಗಿರುವಾಗಲೇ ಕುಮಾರಸ್ವಾಮಿ ಹಾಗೂ ಸತೀಶ್‌ ಜಾರಕಿಹೊಳಿ ರಹಸ್ಯ ಮೀಟಿಂಗ್‌ ಮಾಡಿರುವುದು ಹಲವಾರು ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ..

Share Post