HealthLifestyle

ತುಪ್ಪದ ಅಸಲೀತನದ ಪರೀಕ್ಷೆ ಮಾಡುವುದು ಹೇಗೆ..?

ಕೆಎಂಎಫ್‌ನ ನಂದಿನಿ ತುಪ್ಪ ಸೇರಿದಂತೆ ಮಾರುಕಟ್ಟೆಯಲ್ಲಿ ಹಲವಾರು ಬ್ರಾಂಡ್‌ನ ತುಪ್ಪಗಳಿವೆ.. ಇದರ ಜೊತೆಗೆ ಖಾಸಗಿಯಾಗಿಯೂ ತುಪ್ಪ ಮಾರುವವರಿದ್ದಾರೆ.. ಆದ್ರೆ ಇದರ ನಡುವೆ ನಕಲಿ ತುಪ್ಪದ ಹಾವಳಿ ಕೂಡಾ ಹೆಚ್ಚಾಗಿದೆ.. ಬ್ರಾಂಡ್‌ ತುಪ್ಪ ಕೂಡಾ ಅಸಲಿಯೋ ನಕಲಿಯೋ ಎಂಬುದರ ಬಗ್ಗೆ ಅನುಮಾನವಿದೆ.. ಯಾಕಂದ್ರೆ ಕೆಲವರು ಬ್ರಾಂಡ್‌ ಗಳನ್ನೂ ನಕಲಿ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.. ವರ್ಷದ ಹಿಂದೆ ಮೈಸೂರಿನಲ್ಲಿ ನಂದಿನಿ ಹೆಸರಿನಲ್ಲಿ ಕಲಬೆರಕೆ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿತ್ತು.. ಹೀಗಾಗಿ ತುಪ್ಪ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬೇಕಾದ ಅವಶ್ಯಕತೆ ಇದೆ.. ಜನ ಸಾಮಾನ್ಯರಿಗೆ ಈ ಬಗ್ಗೆ ಗೊತ್ತಿದ್ದರೆ ಸುಲಭವಾಗಿ ತುಪ್ಪದ ಅಸಲೀತನ ತಿಳಿಯಬಹುದು..
ಕುದಿಸಿದರೆ ಅಸಲಿತನ ಗೊತ್ತಾಗುತ್ತೆ..!;
ಕೊಂಚ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಅದನ್ನು ಚೆನ್ನಾಗಿ ಬಿಸಿ ಮಾಡಬೇಕು.. ನಂತರ ಅದನ್ನು ತಣ್ಣಗಾಗಲು ಬಿಟ್ಟರೆ, ತುಪ್ಪದ ಮೇಲೆ ಪ್ರತ್ಯೇಕ ಪದರವೊಂದು ಏರ್ಪಡುತ್ತದೆ.. ಹಾಗೇನಾದರೂ ಕಂಡುಬಂದರೆ ಅದು ಕಲಬೆರಕೆಯಾಗಿದ್ದು, ಕಡಿಮೆ ಬೆಲೆಯ ಎಣ್ಣೆಗಳನ್ನು ಅದಕ್ಕೆ ಸೇರಿಸಲಾಗಿದೆ ಎಂದು ತಿಳಿಯಬಹುದು..
ನೀರಿನಲ್ಲಿ ಹಾಕಿದರೆ ತೇಲಬೇಕು;
ಇನ್ನು ಒಂದು ಬಟ್ಟಲು ನೀರು ತೆಗೆದುಕೊಂಡು ಅದರ ಮೇಲೆ ಒಂದು ಚಮಚ ಗಟ್ಟಿ ತುಪ್ಪ ಹಾಕಬೇಕು.. ಆಗ ಅದು ಕರಗದೆ ಹಾಗೆಯೇ ತೇಲಿದರೆ ಅದು ಅತ್ಯಂತ ಪರಿಶುದ್ಧ ತುಪ್ಪ ಎಂದು ಅರ್ಥೈಸಬಹುದು..
ಅಂಗೈ ಮೇಲೆ ಹಾಕಿ ನೋಡಿ;
ಇನ್ನು ಸ್ವಲ್ಪ ತುಪ್ಪವನ್ನು ಅಂಗೈಗೆ ಹಾಕಿದರೆ ಅದು ಕೆಲ ಹೊತ್ತಿನಲ್ಲಿ ದೇಹದ ಶಾಖಕ್ಕೆ ನಿಧಾನವಾಗಿ ಕರಗಲು ಶುರುವಾಗುತ್ತದೆ.. ಒಂದು ವೇಳೆ ತುಪ್ಪ ಕಲಬೆರಕೆಯಾಗಿದ್ದರೆ ಎಷ್ಟು ಹೊತ್ತಾದರೂ ಅದು ಗಟ್ಟಿಯಾಗಿಯೇ ಇರುತ್ತದೆ..
ಅಯೋಡಿನ್‌ ಹಾಕಿ ನೋಡಬಹುದು;
ಇನ್ನು ಮಾರುಕಟ್ಟೆಯಲ್ಲಿ ಅಯೋಡಿನ್‌ ಸಿಗುತ್ತದೆ.. ಅದನ್ನು ತಂದು ಸ್ವಲ್ಪ ತುಪ್ಪದ ಜೊತೆಗೆ ಒಂದೆರಡು ಹನಿ ಅಯೋಡಿನ್‌ ಹಾಕಬೇಕು.. ಒಂದು ವೇಳೆ ತುಪ್ಪದಲ್ಲಿ ಗಂಜಿಯಂತಹ ಕಲಬೆರಕೆ ವಸ್ತುಗಳನ್ನು ಹಾಕಿದ್ದರೆ ಅದು ನೀಲಿಬಣ್ಣಕ್ಕೆ ತಿರುಗುತ್ತದೆ. ಯಾವುದೇ ಬಣ್ಣ ಬದಲಾಗದಿದ್ದರೆ ಅದು ಶುದ್ಧ ತುಪ್ಪ ಎಂದು ಹೇಳಬಹುದು.
ಎಚ್‌ಸಿಎಲ್‌ ಪರೀಕ್ಷೆ ಮಾಡಿಸಿ;
ಇನ್ನು ಹೈಡ್ರೋಕ್ಲೀರಿಕ್‌ ಆಸಿಡ್‌ ಅನ್ನು ಒಂದು ಟೆಸ್ಟ್‌ ಟ್ಯೂಬ್‌ನಲ್ಲಿ ಹಾಕಿದ ತುಪ್ಪಕ್ಕೆ ಕೆಲ ಹನಿಗಳನ್ನು ಸೇರಿಸಿ. ಅದನ್ನು ಅಲ್ಲಾಡಿಸಿ. ಆಗ ತುಪ್ಪ ಕಲಬೆರಕೆಯಾಗಿದ್ದ ಕೆಂಪು ಬಣ್ಣಕ್ಕೆ ಬದಲಾಗುತ್ತದೆ..

Share Post