BengaluruPolitics

ಡಿಕೆ ಸಹೋದರರ ಸಿದ್ದರಾಮಯ್ಯ ಜಪಕ್ಕೆ ಕಾರಣಗಳೇನು..?

ಬೆಂಗಳೂರು; ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ.. ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದರೆ ಮುಂದಿನ ಸಿಎಂ ಯಾರು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.. ಹೀಗಿರುವಾಗಲೇ ದಲಿತ ನಾಯಕರೆಲ್ಲಾ ಉತ್ಸಾಹದಿಂದ ಓಡಾಡುತ್ತಿದ್ದಾರೆ.. ನಿರಂತರ ಭೇಟಿಗಳು, ಸಭೆಗಳು ನಡೆಯುತ್ತಿವೆ.. ವಿಶೇಷವಾಗಿ ಸತೀಶ್‌ ಜಾರಕಿಹೊಳಿ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.. ಇದು ಹೀಗಿರಬೇಕಾದರೆ, ಡಿ.ಕೆ.ಶಿವಕುಮಾರ್‌ ಅವರು ಕೂಡಾ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.. ಆದ್ರೆ ಅವರ್ಯಾಕೋ ಸಿಎಂ ಸ್ಥಾನಕ್ಕೆ ಈಗ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.. ಅದರ ಬದಲಾಗಿ ಸಿಎಂ ಸಿದ್ದರಾಮಯ್ಯ ಪರವಾಗಿ ನಿಂತಿದ್ದಾರೆ.. ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಕೂಡಾ ಸಿದ್ದರಾಮಯ್ಯ ಹೆಸರನ್ನೇ ಹೇಳುತ್ತಿದ್ದಾರೆ.. ಡಿ.ಕೆ.ಸಹೋದರರ ಈ ನಡೆ ಕೂಡಾ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..
ದಲಿತ ನಾಯಕರು ಸಾಲು ಸಾಲು ಸಭೆಗಳನ್ನು ನಡೆಸುವುದು, ಹೈಕಮಾಂಡ್‌ ಭೇಟಿಯಾಗುವುದು ಮಾಡುತ್ತಿದ್ದಾರೆ.. ಹೀಗಿರುವಾಗಲೇ ಸತೀಶ್‌ ಜಾರಕಿಹೊಳಿಗೆ ಸಿಎಂ ಸ್ಥಾನ ಸಿಕ್ಕೇಬಿಡುತ್ತದೆ ಎಂದೂ ಮಾತನಾಡಲಾಗುತ್ತಿದೆ.. ಇಂತಹ ಸಂದರ್ಭದಲ್ಲಿ ಡಿಕೆ ಸಹೋದರರ ಮಾತಿನ ಶೈಲಿ ಸಾಕಷ್ಟು ಬದಲಾಗುತ್ತಾ ಬರುತ್ತಿದೆ.. ಡಿಕೆ ಸಹೋದರರಿಬ್ಬರೂ ಈಗ ಪ್ರಬಲವಾಗಿ ಸಿದ್ದರಾಮಯ್ಯ ಪರವಾಹಗಿ ಮಾತನಾಡುತ್ತಿದ್ದಾರೆ.. ಅವರೇ ಸಿಎಂ ಆಗಿ ಮುಂದುವರೆಯಬೇಕು ಎಂದು ಹೇಳುತ್ತಿದ್ದಾರೆ.. ಅವರೇ ಉಳಿದ ಅವಧಿ ಪೂರ್ಣಗೊಳಿಸುತ್ತಾರೆ ಎಂದೇ ಡಿಕೆ ಸಹೋದರರು ಹೇಳುತ್ತಿದ್ದಾರೆ..
ಈ ಹಿಂದೆ ಎರಡೂ ವರ್ಷದ ನಂತರ ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಬಿಟ್ಟುಕೊಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು.. ಆದ್ರೆ ಈಗ ಅದೇ ಡಿಕೆ ಸಹೋದರರು ಸಿದ್ದರಾಮಯ್ಯ ಅವರೇ ಅವಧಿ ಪೂರ್ತಿಗೊಳಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ.. ರಾಜ್ಯ ರಾಜಕೀಯದಲ್ಲಿ ಈ ಬೆಳವಣಿಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ.. ಒಂದು ಕಡೆ ಸತೀಶ್‌ ಜಾರಕಿಹೊಳಿ, ಮಹದೇವಪ್ಪ, ಜಿ.ಪರಮೇಶ್ವರ್‌ ಸೇರಿ ಹಲವು ದಲಿತ ನಾಯಕರು ಆಗಿಂದಾಗ್ಗೆ ಮೀಟಿಂಗ್‌ಗಳು, ಭೇಟಿಗಳು ಮಾಡುತ್ತಿದ್ದಾರೆ.. ಇವರೆಲ್ಲರೂ ಕೂಡಾ ಸಿದ್ದರಾಮಯ್ಯ ಆಪ್ತರೇ.. ಆದ್ರೆ, ಡಿಕೆ ಸಹೋದರರು ಸಿದ್ದರಾಮಯ್ಯರಿಂದ ದೂರ ಎಂದೇ ಹೇಳಲಾಗುತ್ತಿತ್ತು.. ಆದ್ರೆ ಈಗ ಸಿದ್ದರಾಮಯ್ಯ ಅವರ ಆಪ್ತರು ಮೀಟಿಂಗ್‌ಗಳನ್ನು ಮಾಡುತ್ತಿದ್ದಾರೆ.. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳುತ್ತಲೇ ಅವರು ಸಭೆಗಳನ್ನು ಮುಂದುವರೆಸಿದ್ದಾರೆ.. ಇತ್ತ ಸಿಎಂ ಸ್ಥಾನಕ್ಕಾಗಿ ಕಸರತ್ತು ಮಾಡಬೇಕಿದ್ದ ಡಿಕೆ ಶಿವಕುಮಾರ್‌ ಮಾತ್ರ, ಸಿದ್ದರಾಮಯ್ಯ ಅವರ ಹೆಸರೇಳುತ್ತಿದ್ದಾರೆ.. ಇದು ರಾಜ್ಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ..
ಡಿ.ಕೆ. ಸಹೋದರರು ಮಾತಿನ ಧಾಟಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ರಾಜಕೀಯ ತಂತ್ರಗಾರಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ.. ಸಿದ್ದರಾಮಯ್ಯ ಮುಂದಿನ ಡಿಸೆಂಬರ್‌ ತನಕವೂ ಗಟ್ಟಿಯಾಗಿದ್ದರೆ ಮಾತ್ರ ಡಿಕೆ ಶಿವಕುಮಾರ್​​ಗೆ ಅನುಕೂಲ. ಸಿದ್ದರಾಮಯ್ಯ ಮುಂದುವರಿದರೆ ಮಾತ್ರ ಮುಂದಿನ ಅಧಿಕಾರ ಹಂಚಿಕೆಯಾಗುತ್ತೆ ಎಂಬ ವಿಚಾರ ಡಿಕೆ ಸಹೋದರ ಮನಸ್ಸಿನಲ್ಲಿ ಬೇರೂರಿದೆ ಎಂದು ಹೇಳಲಾಗುತ್ತಿದೆ.. ಈ ಕಾರಣಕ್ಕಾಗಿ ಈ ತಂತ್ರಗಾರಿಕೆ ನಡೆಸಲಾಗುತ್ತಿದೆ..

Share Post