BengaluruCrime

ರೋಹಿಣಿ ಕ್ಯಾನ್ಸರ್ ಇದ್ದ ಹಾಗೆ : ಐಪಿಎಸ್‌ ಅಧಿಕಾರಿ ಡಿ.ರೂಪಾರವರ ಆಡಿಯೋ ಲೀಕ್‌ ?

ಬೆಂಗಳೂರು; ರಾಜ್ಯದ ಹಿರಿಯ ಹಾಗೂ ಪ್ರಾಭಾವಿ ಅಧಿಕಾರಿಗಳ ಬೀದಿಜಗಳಕ್ಕೆ ಸಕಾ೯ರ ಒಂದು ಹಂತದ ಬ್ರೇಕ್‌ ಹಾಕಿದೆಯಾದರೂ ಇದು ನಿಲ್ಲುವ ಹಂತ ಕಾಣುತ್ತಿಲ್ಲ ಈ ಇಬ್ಬರ ಯಾವಕಾರಣಕ್ಕೆ ವೈಕ್ತಿಕವಾಗಿ ಕೆಸರೆರಚಿಕೊಳ್ಳುತಿದ್ದಾರೋ ಗೋತ್ತಿಲ್ಲ ಆದರೆ ರಾಜ್ಯದ ಜನರಿಗೆ ಅಧಿಕಾರಿಗಳ ಮೇಲಿನ ಗೌರವ ಕಡಿಮೆಯಾಗಿದೆ. ಈಗ ಐಪಿಎಸ್‌ ಅಧಿಕಾರಿ ಡಿ.ರೂಪಾರವರ ವಿರುದ್ಧ ಡೂರು ನೀಡಲು ಮುಂದಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಗಂಗರಾಜುರವರಿಗೆ ರೋಹಿಣಿ ಸಿಂಧೂರಿಯವರ ವಿಚಾರವಾಗಿ ರೂಪಾ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋವನ್ನ ಬಿಡುಗಡೆ ಮಾಡಿದ್ದಾರೆ. ಈ ಸಂಭಾಷಣೆಯಲ್ಲಿ ಬೆದರಿಕೆಯನ್ನು ಹಾಕಲಾಗಿದೆ ಎಂದು ಗಂಗರಾಜು ಹೇಳುತಿದ್ದಾರೆ.
ಈ ಆಡಿಯೋ ವೈರಲ್ ಆಗಿದೆ, ಆಡಿಯೋದಲ್ಲಿ ರೂಪಾ ಗಂಗರಾಜುಗೆ ರೋಹಿಣಿ ವಿರುದ್ಧ ದೂರು ನೀಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಆಡಿಯೋದಲ್ಲಿ ರೋಹಿಣಿಯವರನ್ನೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ,ರೋಹಿಣಿ ತನ್ನ ಪತಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತಿದ್ದಾರೆ ಎಂದು ಹೇಳಲಾಗಿದೆ ಎಂದು ಸಾಮಾಜಿಕ ಕಾಯ೯ಕತ೯ ಆರೋಪ ಮಾಡಿದ್ದಾರೆ. ವೈರಲ್‌ ಆಗಿರುವ ಆಡಿಯೋದಲ್ಲಿ ಡಿ ರೂಪ ನನ್ನ ಪತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನ ಬಲಸಿಕೊಂಡು ರಿಯಲ್‌ ಎಸ್ಟೇಟ್ ವ್ಯವಹಾರ ಮಾಡುತಿದ್ದಾರೆ ಎಂದು ಹೇಳಲಾಗಿದೆ. ರೋಹಿಣಿ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಡಿಕೆ ರವಿ ವಿಷ್ಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಡಿ.ರೂಪಾ ಗಂಗರಾಜು ಜತೆ ಸಂಭಾಷಣೆ ವೇಳೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

Share Post