Bengaluru

ಬಿಎಂಟಿಸಿ ನೌಕರರಿಗೆ ಗುಡ್‌ ನ್ಯೂಸ್‌; 6960 ನೌಕರರ ಮೇಲಿನ ಕೇಸ್‌ಗಳಿಗೆ ಮುಕ್ತಿ

ಬೆಂಗಳೂರು; ಬಿಎಂಟಿಸಿ ನೌಕರರಿಗೆ ಹೊಸ ವರ್ಷಕ್ಕೆ ಹೊಸ ಗಿಫ್ಟ್‌ ಸಿಕ್ಕಿದೆ. ಬಿಎಂಟಿಸಿಯ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಾಕಲಾಗಿದ್ದ ಕೇಸ್‌ಗಳಿಂದ ಖುಲಾಸೆ ಮಾಡಲಾಗಿದೆ. ಬಿಎಂಟಿಸಿ ಎಂಡಿ ಜಿ.ಸತ್ಯವತಿ ಈ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ 6960 ಮಂದಿ ನೌಕರರು ನಿಟ್ಟುಸಿರುಬಿಟ್ಟಿದ್ದಾರೆ.

ಐದು ಸಾವಿರ ರೂಪಾಯಿ ದಂಡ, ಇನ್ಕ್ರಿಮೆಂಟ್‌ ಕಟ್‌, ಡಿಸ್ಮಿಸ್‌, ಸಸ್ಮೆಂಡ್‌ ಹೀಗೆ ಹಲವು ಶಿಕ್ಷೆಗಳ ಭಯದಲ್ಲಿದ್ದ ನೌಕರರಿಗೆ ಈಗ ರಿಲೀಫ್‌ ಸಿಕ್ಕಿದೆ. ಸಣ್ಣಪುಟ್ಟ ತಪ್ಪುಗಳಿಗೂ ಶಿಕ್ಷೆಗೆ ಒಳಗಾಗಿದ್ದ ನೌಕರರ ನೆರವಿಗೆ ನಿಂತಿರುವ ಬಿಎಂಟಿಸಿ, ಅವರ ಮೇಲಿನ ಕೇಸ್‌ಗಳಿಂದ ಖುಲಾಸೆ ಮಾಡಿದೆ.

ಬಸ್‌ ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ಕೊಡದಿದ್ದದ್ದು, ಪದೇ ಪದೇ ಗೈರು ಹಾಜರಿ, ಸಂಚಾರಿ ನಿಯಮ ಉಲ್ಲಂಘನೆ, ಬಸ್​ಗಳನ್ನು ಹೇಗಂದ್ರೆ ಹಾಗೆ, ಎಲ್ಲೆಂದರೆ ಅಲ್ಲಿ ನಿಲ್ಲಿಸುತ್ತಿದ್ದದ್ದು, ಡೋರ್ ಹಾಕದೆ ಬಸ್ ಚಾಲನೆ ಮಾಡಿದ್ದು, ಯೂನಿಫಾರಂ ಹಾಕದೆ ಡ್ಯೂಟಿ ಮಾಡಿರುವುದಕ್ಕೆ ದಂಡ, ಶಿಕ್ಷೆ ವಿಧಿಸಲಾಗಿತ್ತು. ಈಗ ಅದೆಲ್ಲವನ್ನೂ ವಜಾ ಮಾಡಲಾಗಿದೆ.

 

Share Post