NationalPolitics

ನೀತಿ ಆಯೋಗದ ಸಭೆಯಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಕೌಟ್‌

ನವದೆಹಲಿ; ನೀತಿ ಆಯೋಗದ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೊರನಡೆದಿದ್ದಾರೆ.. ಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ, ನನ್ನ ಮೈಕ್‌ ಆಫ್‌ ಮಾಡಲಾಗಿತ್ತು ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.. ಪಶ್ಚಿಮ ಬಂಗಾಳ ರಾಜ್ಯಕ್ಕೆ ಅನುದಾನ ಹಂಚಿಕೆ ಬಗ್ಗೆ ಮಾತನಾಡಲು ಶುರು ಮಾಡುತ್ತಿದ್ದಂತೆ ನನ್ನ ಮೈಕ್‌ ಆಫ್‌ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

NITI ಆಯೋಗದ 9 ನೇ ಆಡಳಿತ ಮಂಡಳಿ ಸಭೆಯನ್ನು ಇಂದು ಆಯೋಜಿಸಲಾಗಿತ್ತು.. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಸಂಸ್ಕೃತಿ ಕೇಂದ್ರದಲ್ಲಿ ಈ ಸಭೆ ನಡೆಯಿತು. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ಆಡಳಿತಾರೂಢ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಎನ್ ಡಿಎ ಪ್ರಮುಖ ಪಾಲುದಾರರಾಗಿರುವ ಬಿಹಾರ ಸಿಎಂ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ತಮ್ಮ ಬದಲಾಗಿ ಉಪಮುಖ್ಯಮಂತ್ರಿಯನ್ನು ಸಭೆಗೆ ಕಳುಹಿಸಿದ್ದರು.. ಇದು ತೀವ್ರ ಚರ್ಚೆಗೆ ಕಾರಣವಾಗಿದೆ..
ಇದನ್ನೂ ಓದಿ; ಇಂತಹ ವ್ಯಕ್ತಿಗಳು ನಮ್ಮ ಲೈಫ್‌ನಲ್ಲಿ ಎಂಟ್ರಿ ಆದರೆ ಸರ್ವನಾಶ ಗ್ಯಾರೆಂಟಿ!

ಇತ್ತ ಬಜೆಟ್‌ನಲ್ಲಿ ತಮ್ಮ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಭೆಗೆ ಹಾಜರಾಗಿರಲಿಲ್ಲ.. ಆದ್ರೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಭೆಗೆ ಬಂದಿದ್ದರು.. ಆದ್ರೆ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲವಂತೆ.. ಹೀಗಾಗಿ ಸಭೆಯಿಂದ ಅರ್ಧಕ್ಕೇ ಮಮತಾ ಹೊರನಡೆದಿದ್ದಾರೆ.. ಹೊರಗೆ ಬಂದ ಮೇಲೆ ಮಾತನಾಡಿದ ಮಮತಾ ಬ್ಯಾನರ್ಜಿ, ನನಗೆ ಮಾತ್ರ ಯಾಕೆ ತಾರತಮ್ಯ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದರು.. ಸಭೆಯಲ್ಲಿ ಆಂಧ್ರ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರಿಗೆ 20 ನಿಮಿಷ ಅವಕಾಶ ನೀಡಲಾಗಿತ್ತು. ಬಿಜೆಪಿ ಇತರ ಸಿಎಂಗಳಿಗೂ 15 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ.. ಆದ್ರೆ ನಾನು ಮಾತನಾಡಲು ಹೋದಾಗ ಮೈಕ್‌ ಆಫ್‌ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದರು..

ಇದನ್ನೂ ಓದಿ; 45 ವರ್ಷಕ್ಕೇ ನಿವೃತ್ತಿ ಹೊಂದಿ ಸುಖವಾಗಿ ಬಾಳೋದಕ್ಕೆ ಇಲ್ಲಿದೆ ಸೂತ್ರ!

Share Post