ದೇವೇಗೌಡರನ್ನು ಅಪ್ಪಿ ಬಿಕ್ಕಿಬಿಕ್ಕಿ ಅತ್ತ ಜಿ.ಟಿ.ದೇವೇಗೌಡ; ಜೆಡಿಎಸ್‌ನಲ್ಲೇ ಉಳೀತಾರಂತೆ ಜಿಟಿಡಿ
ಮೈಸೂರು; ಜೆಡಿಎಸ್ ತೊರೆಯಲು ತುದಿಗಾಲಲ್ಲಿ ನಿಂತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಈ ಜೆಡಿಎಸ್‌ನಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಕಾರ್ಯಾಗಾರ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಳ್ಳಲು ದೇವೇಗೌಡರು ಮೈಸೂರಿಗೆ ಬಂದಿದ್ದರು. ಈ ವೇಳೆ ಗೌಡರು ಜಿಟಿಡಿ ನಿವಾಸಕ್ಕೆ ಆಗಮಿಸಿ ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ಈ ವೇಳೆ ಜಿಟಿಡಿ ದೇವೇಗೌಡರನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಇದೇ ವೇಳೆ ಮಾತನಾಡಿರುವ ಜಿ.ಟಿ.ದೇವಗೌಡರು, ನಾನು ಜೆಡಿಎಸ್ ಬಿಡುವುದಿಲ್ಲ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. ದೇವೇಗೌಡರಿಗೆ ನನ್ನ ಬಗ್ಗೆ ಬಹಳ ಪ್ರೀತಿ ಇದೆ, ಅವ್ರು ನನ್ನನ್ನು ಮರಿ ದೇವೇಗೌಡ ಅಂತಾನೇ ಕರೀತಾರೆ ಎಂದು ಹೇಳಿದರು. ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದ್ದಾರೆ. ಅವರ ಕನಸು ನನಸು ಮಾಡಲು ನಾವೆಲ್ಲಾ ಶ್ರಮಿಸುತ್ತೇವೆ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ. ದೇವೇಗೌಡರಿಗೆ ಮತ್ತು ಹುಣಸೂರಿನಿಂದ ಅವರ ಪುತ್ರ ಜಿ.ಡಿ.ಹರೀಶ್‌ಗೌಡಗೆ ಜೆಡಿಎಸ್ ಟಿಕೆಟ್ ಖಚಿತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.