CrimeNational

ರಸ್ತೆಯಿಂದ ಜಾರಿ ಪ್ರಪಾತಕ್ಕೆ ಉರುಳಿದ ವ್ಯಾನ್‌; 5 ಮಕ್ಕಳು ಸೇರಿ 8 ಮಂದಿ ದುರ್ಮರಣ!

ಜಮ್ಮು-ಕಾಶ್ಮೀರ; ಖಾಸಗಿ ವ್ಯಾನ್‌ ಒಂದು ಆಳದ ಕಂದಕಕ್ಕೆ ಉರುಳಿಬಿದ್ದು ದೊಡ್ಡ ದುರಂತ ನಡೆದಿದೆ.. ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ದಕ್ಸಮ್‌ ಪ್ರದೇಶದಲ್ಲಿ ಈ ದುರಂತ ನಡೆದಿದ್ದು, ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದ್ರಲ್ಲಿ 5 ಮಂದಿ ಮಕ್ಕಳೇ ಇದ್ದಾರೆ ಅನ್ನೋದು ದುಃಖಪಡುವ ವಿಚಾರ.

ಇದನ್ನೂ ಓದಿ; 45 ವರ್ಷಕ್ಕೇ ನಿವೃತ್ತಿ ಹೊಂದಿ ಸುಖವಾಗಿ ಬಾಳೋದಕ್ಕೆ ಇಲ್ಲಿದೆ ಸೂತ್ರ!

ಮಕ್ಕಳೊಂದಿಗೆ ಖಾಸಗಿ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯಿಂದ ವ್ಯಾನ್‌ ಜಾರಿ ಪ್ರಪಾತಕ್ಕೆ ಬಿದ್ದಿದೆ. ನೂರಾರು ಅಡಿ ಆಳಕ್ಕೆ ವಾಹನ ಬಿದ್ದಿದ್ದರಿಂದ ಈ ದುರಂತ ನಡೆದಿದೆ.. ವಾಹನ ಹಲವಾರು ಬಾರಿ ಉರುಳಿಕೊಂಡು ಹೋಗಿದ್ದರಿಂದ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಷ್ಟೇ ಅಲ್ಲದೆ ವಾಹನದಲ್ಲಿದ್ದವರು ಗುರುತು ಸಿಗದಷ್ಟು ಅಪ್ಪಚ್ಚಿಯಾಗಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.. ವಾಹನದಲ್ಲಿದ್ದ ಐವರು ಮಕ್ಕಳು ಹಾಗೂ ಮೂವರು ಹಿರಿಯರು ಸಾವನ್ನಪ್ಪಿದ್ದಾರೆ.. ವೀಕೆಂಡ್‌ ಆದ್ದರಿಂದ ಎಂಜಾಯ್‌ ಮಾಡಲು ಹೋಗುತ್ತಿದ್ದರು.. ಈ ವೇಳೆ ಭಾರೀ ದುರಂತ ನಡೆದಿದೆ..

Share Post