Health

ಹೀರೇಕಾಯಿ ಬಗ್ಗೆ ನಿರ್ಲಕ್ಷ್ಯ ಬೇಡ; ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಗೊತ್ತಾ..?

ಹೀರೇಕಾಯಿ.. ಭಾರತದಾದ್ಯಂತ ಎಲ್ಲರಿಗೂ ಪರಿಚಿತವಿರುವ ತರಕಾರಿ.. ಸಾಂಬಾರಿಗೆ, ಬೋಂಡಾ, ಬಜ್ಜಿಗೆ, ಪಲ್ಯಕ್ಕೆ ಈ ತರಕಾರಿಯನ್ನು ಬಳಸುತ್ತಾರೆ.. ಆದ್ರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತೇ ಇಲ್ಲ.. ಹೀರೇಕಾಯಿಯಿಂದ ತಯಾರಿಸಿದ ಅನೇಕ ಭಕ್ಷ್ಯಗಳನ್ನು ಎಲ್ಲರೂ ಇಷ್ಟಪಡುತ್ತಾರೆ.. ಮಾರುಕಟ್ಟೆಯಿಂದ ತರಕಾರಿ ತರುವಾಗ ಎಲ್ಲರೂ ಹೀರೇಕಾಯಿಯನ್ನು ತಂದೇ ತರುತ್ತಾರೆ.. ಆದ್ರೂ ಅದರ ಪ್ರಯೋಜನಗಳು ಮಾತ್ರ ಬಹುತೇಕರಿಗೆ ಗೊತ್ತಿಲ್ಲ..

ಇದನ್ನೂ ಓದಿ; Loksabha; ಅಭ್ಯರ್ಥಿ ಆಯ್ಕೆಯಲ್ಲಿ ಯಡಿಯೂರಪ್ಪ ಎಡವಿದ್ರಾ..?; ಬಿಜೆಪಿಯಲ್ಲಿ ಇಷ್ಟೊಂದು ಅಪಸ್ವರ ಯಾಕೆ..?

ಬೇಯಿಸಲು ಹೆಚ್ಚು ಶ್ರಮ ಪಡಬೇಕಾದ ಅಗತ್ಯವಿಲ್ಲ;

ಹೀರೇಕಾಯಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ.. ಇನ್ನು ಇದನ್ನು ಬೇಯಿಸಲು ಹೆಚ್ಚು ಶ್ರಮ ಪಡಬೇಕಿಲ್ಲ.. ಏಕೆಂದರೆ ಇದು ಅತ್ಯಂತ ಮೃದುವಾಗಿದ್ದು, ಬೇಗ ಬೇಯುತ್ತದೆ.. ಸುಲಭವಾಗಿ ಬೇಯಿಸಲು ಸಾಧ್ಯವಾಗುವುದರಿಂದ ಬಹುಬೇಗ ಅಡುಗೆಯನ್ನು ತಯಾರಿಸಬಹುದು.. ಈ ಹೀರೇಕಾಯಿಯನ್ನು ಹಲವು ರೀತಿಯಲ್ಲಿ ಬೇಯಿಸಿ ತಿನ್ನುತ್ತಾರೆ. ಬೇಸಿಗೆಯಲ್ಲಿ ಅತಿ ಹೆಚ್ಚು ನೀರಿನಂಶವಿರುವ ಈ ಹೀರೇಕಾಯಿಯನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಹಲವಾರು ಪೋಷಕಾಂಶಗಳನ್ನು ಹೊಂದಿರುವ ಈ ಹಿರೇಕಾಯಿಯನ್ನು ಅನ್ನು ತಿನ್ನುವುದರಿಂದ ಆಗುವ ಅನೇಕ ಆರೋಗ್ಯ ಪ್ರಯೋಜನಗಳಿವೆ..

ಇದನ್ನೂ ಓದಿ; ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಫಿಕ್ಸ್‌; ಸಂಜೆ ಅಧಿಕೃತ ಘೋಷಣೆ!

ಪೌಷ್ಟಿಕಾಂಶಗಳು ಸಮೃದ್ಧ;

ಹೀರೇಕಾಯಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ.ಇದು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ಫೋಲೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ ನಂತಜ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಹೀಗಾಗಿ ಸತತವಾಗಿ ಆಹಾರದಲ್ಲಿ ಈ ಹೀರೇಕಾಯಿ ಬಳಸುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಾಂಬರ್‌ ಸಂಪರ್ಕದಲ್ಲಿದ್ದ ಇಬ್ಬರು ವಶ!

ಹೀರೇಕಾಯಿ ದೇಹದ ತೂಕ ನಿಯಂತ್ರಿಸುತ್ತದೆ;

ಹಿರೇಕಾಯಿ ವಿಶೇಷವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ತಿನ್ನುವುದರಿಂದ ದೇಹದ ಶಕ್ತಿ ವೃದ್ಧಿಯಾಗುತ್ತದೆ.. ಇದು ಹೆಚ್ಚಿನ ಪ್ರಮಾಣದ ನೀರು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಆಹಾರವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಹೀರೇಕಾಯಿ ತರಕಾರಿಯನ್ನು ತೂಕ ನಿಯಂತ್ರಣಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ; ಮೈಸೂರು ಗೆಲ್ಲಲು ʻಆಪರೇಷನ್‌ ಹಸ್ತʼ; ಯಡಿಯೂರಪ್ಪ ಆಪ್ತರೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್‌

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ;

ಈ ಹಿರೇಕಾಯಿ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಇದನ್ನು ತಿಂದ ನಂತರ ಸಾಮಾನ್ಯವಾಗಿ ಗ್ಯಾಸ್ ಅಥವಾ ಅಜೀರ್ಣದ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ.. ಈ ಹೀರೇಕಾಯಿ ತಿನ್ನುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ.

ಹೃದಯಕ್ಕೆ ಒಳ್ಳೆಯದು;

ಈ ಹೀರೇಕಾಯಿ ಹೃದಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇದೆ. ಹೃದಯದ ಆರೋಗ್ಯಕ್ಕೆ ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಇದನ್ನೂ ಓದಿ; ಜೋಳದ ರೊಟ್ಟಿ ತಿಂದವರು ಗಟ್ಟಿಯಾಗಿರುತ್ತಾರೆ..!; ಯಾಕೆ ಗೊತ್ತಾ..?

ಕರುಳು ಸ್ವಚ್ಛ ಮಾಡುತ್ತದೆ;

ಹಿರೇಕಾಯಿಯು ನಮ್ಮ ಕರುಳನ್ನು ಸ್ವಚ್ಛವಾಗಿಡುತ್ತದೆ. ಜೊತೆಗೆ ಕರುಳು ಆರೋಗ್ಯವಾಗಿಡಲು ಕೂಡಾ ಇದು ಸಹಾಯ ಮಾಡುತ್ತದೆ.. ಇದು ವಿಟಮಿನ್ ಎ ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

Share Post