ರೈತ ಮಹಿಳೆಯರ ಜೊತೆ ಸೋನಿಯಾ ಮಾತು; ರಾಹುಲ್‌ಗೆ ಮದುವೆ ಯಾವಾಗ ಎಂದ ಮಹಿಳೆ
ನವದೆಹಲಿ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಜನಸಾಮಾನ್ಯರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಅದರ ಭಾಗವಾಗಿ ಸೋನಿಯಾಗಾಂಧಿಯವರು ಇತ್ತೀಚೆಗೆ ಮಹಿಳೆಯರ ಹೊಲಗಳಿಗೆ ಭೇಟಿ ನೀಡಿದ್ದರು. ಇದೇ ವೇಳೆ ನಿಮಗೆಲ್ಲಾ ಭೋಜಕೂಟ ಏರ್ಪಡಿಸುತ್ತೇನೆ ಎಂದು ಸೋನಿಯಾಗಾಂಧಿ ಹೇಳಿದ್ದರು. ಅದರಂತೆ ರೈತ ಮಹಿಳೆಯರನ್ನು ಸೋನಿಯಾಗಾಂಧಿಯವರು ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಭೋಜನಕ್ಕೆ ಕರೆದಿದ್ದರು. ಈ ವೇಳೆ ಮಹಿಳೆಯೊಬ್ಬರು ನಿಮ್ಮ ಮಗ ರಾಹುಲ್ ಗಾಂಧಿಗೆ ಯಾವಾಗ ಮದುವೆ ಮಾಡುತ್ತೀರಿ ಎಂದು ಹೇಳಿದ್ದಾರೆ.
ಮಹಿಳೆ ಪ್ರಶ್ನೆಗೆ ನಗಾಡಿದ ಸೋನಿಯಾ ಗಾಂಧಿ, ನೀವೇ ಹುಡುಗಿಯನ್ನು ಹುಡುಕಿ ಎಂದು ಹೇಳಿದ್ದಾರೆ. ಸೋನಿಯಾ ಹಾಸ್ಯ ಚಟಾಕಿಗೆ ಎಲ್ಲರೂ ಖುಷಿಯಾಗಿ ನಗಾಡಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳನ್ನು ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.