CrimeNational

ಕಂತೆ ಕಂತೆ 500ರ ನೋಟುಗಳ ಜೊತೆ ಸೆಲ್ಫಿ; ಫಜೀತಿಗೆ ಸಿಲುಕಿದ ಪೊಲೀಸ್‌ ಅಧಿಕಾರಿ

ಲಕ್ನೋ; ಪೊಲೀಸ್‌ ಅಧಿಕಾರಿಯೊಬ್ಬ 500 ರೂಪಾಯಿ ನೋಟುಗಳ ಕಂತೆಗಳನ್ನು ಬೆಡ್‌ ಮೇಲೆ ಜೋಡಿಸಿ, ಪತ್ನಿ ಹಾಗೂ ಮಕ್ಕಳ ಜೊತೆ ಸೆಲ್ಫಿ ತೆಗೆದುಕೊಂಡಿದ್ದ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿತ್ತು. ಇದೀಗ ಮಾಡಿದ ಕೆಲಸಕ್ಕಾಗಿ ಆ ಅಧಿಕಾರಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಈಗ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದ್ದು, ಇತರೆ ಇಲಾಖಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದೆ.  ಠಾಣೆಯ ಉಸ್ತುವಾರಿಯಾಗಿದ್ದ ರಮೇಶ್ ಚಂದ್ರ ಸಹನಿಯೇ ಈ ಫೋಟೋ ತೆಗೆಸಿಕೊಂಡವರು. ಇದೀಗ ಅವರ ವಿರುದ್ಧ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ. ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿದೆ. ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಆ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆಯೂ ತನಿಖೆಗೆ ಆದೇಶ ನೀಡಲಾಗಿದೆ.

500 ರೂಪಾಯಿ ನೋಟಿನ ಬಂಡಲ್‍ಗಳನ್ನು ಮಂಚದ ಮೇಲೆ ನೀಟಾಗಿ ಜೋಡಿಸಿ ಕುಟುಂಬದ ಜೊತೆ ಸೆಲ್ಫಿ ತೆಗೆಯಲಾಗಿತ್ತು.  ಸುಮಾರು 14 ಲಕ್ಷ ರೂಪಾಯಿ ಹಣ ಇದಾಗಿತ್ತು ಎನ್ನಲಾಗಿದೆ. ಈ ಬೆನ್ನಲ್ಲೇ ಮಾತನಾಡಿರುವ ಆರೋಪಿ ಅಧಿಕಾರಿ,  2021ರ ನವೆಂಬರ್ 14 ರಂದು ತಮ್ಮ ಕುಟುಂಬದ ಆಸ್ತಿ ಮಾರಾಟ ಮಾಡಿದಾಗ ಹಣ ಬಂದಿತ್ತು. ಆ ವೇಳೆ ನಾವು ಮನೆಯಲ್ಲಿ ಕುಟುಂಬದ ಜೊತೆ ಸೆಲ್ಫಿ ತೆಗೆದುಕೊಂಡಿದೆ. ಈಗ ಅದು ವೈರಲ್‌ ಆಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

 

Share Post