Politics

ಸಚಿವರ ವಿರುದ್ಧ ಸಿಡಿದೆದ್ದ ಕೆಲ ಕಾಂಗ್ರೆಸ್‌ ಶಾಸಕರು!; ಸಿಎಲ್‌ಪಿ ಸಭೆಯಲ್ಲಿ ನಡೆದಿದ್ದೇನು..?

ಬೆಂಗಳೂರು; ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು.. ಈ ಸಭೆಯಲ್ಲಿ ಕೆಲ ಶಾಸಕರು ತಮ್ಮದೇ ಪಕ್ಷದ ಕೆಲ ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ತಿಳಿದುಬಂದಿದೆ.. ತಮಗೆ ಸ್ಪಂದಿಸದ ಏಳೆಂಟು ಸಚಿವರ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಹ ಸಚಿವರನ್ನು ಸಂಪುಟದಿಂದ ಕೈಬಿಡುಬೇಕೆಂದು ಒತ್ತಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಬೆಲ್ಲ ಚರ್ಮದ ಕಾಂತಿ ಹೆಚ್ಚಿಸುತ್ತೆ..!; ಯೌವನವಾಗಿರಲು ಬೆಲ್ಲವೇ ಮದ್ದು!

ಗುರುವಾರ ರಾತ್ರಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು.. ಈ ವೇಳೆ ಶಾಸಕರಾದ ರಾಜು ಕಾಗೆ, ನಂಜೇಗೌಡ, ವಿನಯ್‌ ಕುಲಕರ್ಣಿ ಮುಂತಾದ ಶಾಸಕರು, ಸಚಿವ ಕಾರ್ಯವೈಖರಿ ಬಗ್ಗೆ ಚಕಾರ ಎತ್ತಿದ್ದಾರೆ.. ನಾವಿರೋದೇ 136 ಶಾಸಕರು.. 136 ಶಾಸಕರ ನಂಬರ್‌ಗಳು ಸಚಿವರ ಬಳಿ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.. ನಾವು ಕರೆ ಮಾಡಿದರೆ ಕೆಲವು ಸಚಿವರ ಸ್ವೀಕಾರ ಮಾಡೋದಿಲ್ಲ.. ನಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ.. ಇದರಿಂದಾಗಿ ನಾವು ಹೇಗೆ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿಸೋದು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಅನುದಾನ ಸಿಗದೇ ಹೋದರೆ ಕ್ಷೇತ್ರಗಳಿಗೆ ಹೋಗೋದು ತುಂಬಾನೇ ಕಷ್ಟವಾಗುತ್ತದೆ.. ಜನರು ಹಾಗೂ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ.. ಒಂದೂವರೆ ವರ್ಷ ಆಗುತ್ತಿದ್ದರೂ ಯಾವುದೇ ಕಾಮಗಾರಿಗಳು ನಡೆಸಲಾಗುತ್ತಿಲ್ಲ.. ಹೀಗಾಗಿ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಸರಿಯಲ್ಲ ಎಂದೂ ಶಾಸಕರು ಹೇಳಿದ್ದಾರೆ ಎಂದು ತಿಳಿದುಬಂದಿದೆ.. ಸಚಿವರಿಗೆ ನೀವೇ ಬುದ್ಧಿವಾದ ಹೇಳಬೇಕೆಂದು ಸಿಎಂಗೆ ಶಾಸಕರು ಮನವಿ ಮಾಡಿದ್ದು, ಸಚಿವರು ತಮ್ಮ ವರ್ತನೆ ಸರಿ ಮಾಡಿಕೊಳ್ಳದಿದ್ದರೆ ಅಂತಹವರನ್ನು ಸಂಪುಟದಿಂದ ಕೈಬಿಡಿ ಎಂದೂ ಶಾಸಕರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

Share Post