BengaluruPolitics

ಸಿದ್ದರಾಮಯ್ಯ ಮೆಗಾಪ್ಲ್ಯಾನ್‌ ರೆಡಿ; ಶುಕ್ರವಾರದ ರಾಜಕೀಯ ಭಾರೀ ಕುತೂಹಲ!

ಬೆಂಗಳೂರು(Bengaluru); ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಗಸ್ಟ್‌ 29ರವರೆಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.. ಆದ್ರೆ ಅಂದು ಹೈಕೋರ್ಟ್‌ ನೀಡುವ ಆದೇಶದ ಮೇಲೆ ಸಿದ್ದರಾಮಯ್ಯ ಅವರ ಭವಿಷ್ಯ ನಿಂತಿದೆ.. ಒಂದು ಕಡೆ ರಾಜ್ಯಪಾಲರ ಆದೇಶಕ್ಕೆ ತಡೆ ತರಲು ಘಟಾನುಘಟಿ ವಕೀಲರು ಸಿದ್ದರಾಮಯ್ಯ ಪರ ನಿಂತಿದ್ದಾರೆ.. ಇತ್ತ ಸಿದ್ದರಾಮಯ್ಯ ಕೂಡಾ ರಾಜ್ಯಪಾಲರ ಆದೇಶಕ್ಕೆ ತಿರುಗೇಟು ಕೊಡೋದಕ್ಕೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸುತ್ತಿದ್ದಾರೆ.. ಹೈಕಮಾಂಡ್‌ ಭೇಟಿಯಾಗಿ ಹೋರಾಟ ತೀವ್ರಗೊಳಿಸುವುದು ಸೇರಿದಂತೆ ದೇಶಾದ್ಯಂತ ಹೋರಾಟ ವಿಸ್ತರಿಸುವ ಸಲುವಾಗಿ ಮಾತುಕತೆ ನಡೆಸು ಮೆಗಾಪ್ಲ್ಯಾನ್‌ ರೆಡಿಯಾಗಿದೆ..

ಇದನ್ನೂ ಓದಿ; ಬೆತ್ತಲೆಯಾಗಿ ಬಂದ ಮಹಿಳೆಯಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಬಿಟ್ಟು, ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಯಾವ ನಿರ್ಧಾರಗಳು ಕೈಗೊಂಡಿದ್ದಾರೆ.. ಪ್ರಾಸಿಕ್ಯೂಷನ್‌ ಯಾರ ವಿರುದ್ಧ ಹೇಗೆ ಅನುಮತಿ ನೀಡಲಾಗಿದೆ.. ಎಲ್ಲೆಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯಪಾಲರು ಆದೇಶ ನೀಡಿದ್ದಾರೆ ಎಂಬುದರ ಕುರಿತ ದಾಖಲೆಗಳನ್ನು ಸಿದ್ದರಾಮಯ್ಯ ತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ನಕಲಿ NCC ಕ್ಯಾಂಪ್‌; ಬಾಲಕಿ ಮೇಲೆ 8 ಜನರಿಂದ ಲೈಂಗಿಕ ದೌರ್ಜನ್ಯ!

ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಶುಕ್ರವಾರದಂದು ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್‌ ನಾಯಕರನ್ನು ಭೇಟಿಯಾಗಲಿದ್ದಾರೆ.. ರಾಜ್ಯಪಾಲರ ಕಚೇರಿಗಳನ್ನು ಹೇಗೆಲ್ಲಾ ದುರುಯೋಗ ಮಾಡಿಕೊಳ್ಳಲಾಗಿದೆ ಎಂಬುದನ್ನು ಹೈಕಮಾಂಡ್‌ಗೆ ಮನವಿ ಮಾಡಿಕೊಡಲಿದ್ದಾರೆ.. ಈ ಮೂಲಕ ಈ ವಿಚಾರವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ದೊಡ್ಡ ಹೋರಾಟ ರೂಪಿಸುವ ಸಲುವಾಗಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ..
ಇನ್ನು ಎಲ್ಲಾ ರಾಜ್ಯಗಳ ಮಾಹಿತಿಯನ್ನೊಳಗೊಂಡ ದಾಖಲೆಗಳನ್ನು ರಾಷ್ಟ್ರಪತಿಗೂ ನೀಡಿ, ರಾವ ರೀತಿ ರಾಜ್ಯಪಾಲರ ದುರುಪಯೋಗವಾಗುತ್ತಿದೆ ಎಂಬುದನ್ನೂ ರಾಷ್ಟ್ರಪತಿಗೆ ಮನವರಿಕೆ ಮಾಡುವ ಸಾಧ್ಯತೆಯ ಬಗ್ಗೆಯೂ ರ್ಚೆ ನಡೆಯುತ್ತಿದೆ..

ಇದನ್ನೂ ಓದಿ; ಯುವಕನಿಗೆ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ದೂಡಿದ ಮಂಗಳಮುಖಿಯರು!

Share Post