DistrictsPolitics

ಮೋದಿ ವಿಶ್ವಕ್ಕೇ ಹುಲಿ; ಕಾಂಗ್ರೆಸ್‌ ಲೇವಡಿಗೆ ಈಶ್ವರಪ್ಪ ತಿರುಗೇಟು

ಶಿವಮೊಗ್ಗ; ಮೋದಿಯವರು ಇಡೀ ವಿಶ್ವಕ್ಕೇ ಹುಲಿ. ಅವರ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಬಂಡೀಪುರದಲ್ಲಿ ಮೋದಿಯವರಿಗೆ ಹುಲಿ ಕಾಣಲಿಲ್ಲ ಎಂದು ಲೇವಡಿ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್‌ನವರಿಗೆ ಬರೀ ಟೀಕೆ ಮಾಡುವುದಷ್ಟೇ ಕೆಲಸ. ಅವರಿಗೇ ಬೇರೆ ಏನೂ ಗೊತ್ತಿಲ್ಲ. ಹುಲಿ ಕಾಣಲಿಲ್ಲ ಎಂಬುದಕ್ಕೆ ಟೀಕೆ ಮಾಡಿದ್ದಾರೆ. ಕಾಣಿಸಿದ್ದರೂ ಟೀಕೆ ಮಾಡ್ತಾ ಇದ್ದರು. ಇಷ್ಟೇ ಅವರ ಜೀವನ ಎಂದು ಈಶ್ವರಪ್ಪ ಲೇವಡಿ ಮಾಡಿದರು.

 

Share Post