CrimeDistricts

ಮೈಸೂರು ಬಳಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ!

ಮೈಸೂರು(Mysore); ಮೈಸೂರು ದಸರಾಗೆ ಸಿದ್ಧತೆಗಳು ನಡೆದಿವೆ.. ಆಗಲೇ ದಸರಾ ಆನೆಗಳು ಮೈಸೂರಿಗೆ ಬಂದಿವೆ.. ಇಂತಹ ಸಂದರ್ಭದಲ್ಲೇ ಮೈಸೂರು ಬಳಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕೆಂಪಯ್ಯನಹುಂಡಿ ಗೇಟ್‌ನಲ್ಲಿರುವ ಹೋಟೆಲ್‌ ಒಂದರಲ್ಲಿ ಈ ಭಾರೀ ಪ್ರಮಾಣದ ಸ್ಫೋಟಕಗಳು ಸಿಕ್ಕಿವೆ..

ಇದನ್ನೂ ಓದಿ; ನಿತ್ಯ ನೀವು ಮೊಸರು ಸೇವಿಸ್ತೀರಾ..?; ಹಾಗಾದ್ರೆ ಈ ಸುದ್ದಿ ಓದಲೇಬೇಕು!

ಹೋಟೆಲ್‌ಗೆ ಬಂದಿದ್ದ ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್‌ ಕವರ್‌ನಲ್ಲಿಟ್ಟಿದ್ದ ಸ್ಫೋಟಕಗಳನ್ನು ಅಲ್ಲೇ ಇಟ್ಟು ಪರಾರಿಯಾಗಿದ್ದಾರೆ.. ಹೋಟೆಲ್‌ ಸಿಬ್ಬಂದಿ ಅದನ್ನು ಬಿಚ್ಚಿ ನೋಡಿದಾಗ ಸ್ಫೋಟಕಗಳು ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.. ಬಾಂಬ್‌ ನಿಷ್ಕ್ರಿಯದಳ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.. ಟ್ಯೂಬ್‌ ರೀತಿಯಲ್ಲಿ 9 ಸ್ಫೋಟಕಗಳು, ಇದರ ಜೊತೆಗೆ ಒಂದು ನಾಡಬಾಂಬ್‌ ಕೂಡಾ ಅಲ್ಲಿ ಸಿಕ್ಕಿದೆ..

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ಈ ಭಾಗದಲ್ಲಿ ಕಾಡು ಪ್ರಾಣಿಗಳು ಹೆಚ್ಚಿವೆ.. ಹುಲಿ, ಚಿರತೆಗಳ ಓಡಾಟ ಕೂಡಾ ಆಗಾಗ ಇರುತ್ತದೆ.. ಇದರ ಜೊತೆಗೆ ಬೇಟೆಗಾರರ ಕಾಟ ಕೂಡಾ ಹೆಚ್ಚಿದೆ.. ಹೀಗಾಗಿ ಬೇಟೆಗಾರರು ಬೇಟೆಗಾಗಿ ಈ ಸ್ಫೋಟಕಗಳನ್ನು ಬಳಸಲು ತಂದಿರಬಹುದು. ಹೋಟೆಲ್‌ನಲ್ಲಿ ಊಟ ಮಾಡಿ ಅಲ್ಲಿಯೇ ಮರೆತುಹೋಗಿರಬಹುದು ಎಂದು ಶಂಕಿಸಲಾಗಿದೆ.. ಇಲ್ಲವೇ ಕಲ್ಲು ಗಣಿಗಾರಿಕೆಗೆ ಈ ಸ್ಫೋಟಕಗಳನ್ನು ತೆಗೆದುಕೊಂಡು ಬಂದಿರಬಹುದು ಎಂದು ಹೇಳಲಾಗುತ್ತಿದೆ.. ದಸರಾ ಸಮಯದಲ್ಲಿ ಈ ರೀತಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ..

 

Share Post