ಆಸ್ತಿ ವಿವರ ಘೋಷಿಸದಿದ್ದರೆ ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಬರಲ್ಲ!
ಲಕ್ನೋ(Luknow); ಸರ್ಕಾರಿ ಅಧಿಕಾರಿಗಳು ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಲೇಬೇಕು.. ಮಾನವ ಸಂಪದ ಸರ್ಕಾರಿ ಪೋರ್ಟಲ್‌ನಲ್ಲಿ ಆಗಸ್ಟ್ 31ರೊಳಗೆ ಆಸ್ತಿ ವಿವರ ಘೋಷಣೆ ಮಾಡಿಕೊಳ್ಳದಿದ್ದರೆ ಅವರಿಗೆ ಮುಂದಿನ ತಿಂಗಳು ಸಂಬಳ ಬರುವುದಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಆದೇಶ ನೀಡಿದ್ದಾರೆ..
ಇದನ್ನೂ ಓದಿ; ಮೆಗಾಪ್ಲ್ಯಾನ್ ಜೊತೆ ದೆಹಲಿಯತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್
ಸರ್ಕಾರಿ ವೆಬ್‌ಸೈಟ್‌ನಲ್ಲಿ ಅಧಿಕಾರಿಗಳು ತಮ್ಮ ಸ್ಥಿರ ಹಾಗೂ ಚರಾಸ್ತಿಗಳನ್ನು ಘೋಷಣೆ ಮಾಡಿಕೊಳ್ಳಬೇಕು. ಆ ಮೂಲಕ ಪಾರದರ್ಶಕತೆ ಮೆರೆಯಬೇಕು.. ಈಗಾಗಲೇ ಇದಕ್ಕೆ ಸಾಕಷ್ಟು ಅವಕಾಶ ನೀಡಲಾಗಿದೆ.. ಆದ್ರೂ ಕೂಡಾ ಬಹುತೇಕ ಅಧಿಕಾರಿಗಳು ತಮ್ಮ ಆಸ್ತಿ ವಿವರವನ್ನು ಈಗಲೂ ಮುಚ್ಚಿಟ್ಟಿದ್ದಾರೆ.. ಹೀಗಾಗಿ ಆಗಸ್ಟ್ 31 ಅಂತಿಮ ಗಡುವಾಗಿದೆ.. ಅಷ್ಟರೊಳಗೆ ಆಸ್ತಿ ವಿವರ ಘೋಷಣೆ ಮಾಡದಿದ್ದರೆ, ಆಗಸ್ಟ್ ತಿಂಗಳ ಸಂಬಳವನ್ನು ತಡೆಹಿಡಿಯಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ..
ಇದನ್ನೂ ಓದಿ; ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ಸಂಪುಟಕ್ಕಿದೆಯಾ..?
ಸುಮಾರು 13 ಲಕ್ಷ ಉದ್ಯೋಗಿಗಳು ಉತ್ತರ ಪ್ರದೇಶದಲ್ಲಿ ಇನ್ನೂ ಆಸ್ತಿ ವಿವರ ಘೋಷಣೆ ಮಾಡಿಕೊಂಡಿಲ್ಲ.. ಈಗ ಇವರೆಲ್ಲರೂ ತೊಂದರೆಯಾಗಲಿದೆ.. ಜೊತೆಗೆ ಬಡ್ತಿ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ..