CrimePolitics

ಶೋಭಾ ಕರಂದ್ಲಾಜೆ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಯುವಕನ ಬಲಿ!

ಬೆಂಗಳೂರು; ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಬೈಕ್‌ ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿಬಂದಿದೆ.. ಶೋಭಾ ಕಾರು ಚಾಲಕ ಹಿಂದೆ ಮುಂದೆ ನೋಡದೇ ಕಾರಿನ ಬಾಗಿಲು ತೆಗೆದಿದ್ದು, ಇದರಿಂದ ಬೈಕ್‌ ಸವಾರ ಕೆಳಗೆ ಬಿದ್ದಿದ್ದಾಗೆ. ಈ ವೇಳೆ ಬಸ್‌ ಆತನ ಮೇಲೆ ಹರಿದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಂಗಳಮುಖಿ ಅಖಾಡಕ್ಕೆ..!

ಕೆ.ಆರ್‌.ಪುರಂ ಬಳಿ ನಡೆದ ಅಪಘಾತ;

ಕೆ.ಆರ್. ಪುರಂ ಸಮೀಪದ‌ ದೇವಸಂದ್ರ ಬಳಿ ಶೋಭಾ ಕರಂದ್ಲಾಜೆ ಅವರು ಪ್ರಚಾರ ನಡೆಸುತ್ತಿದ್ದರು.. ಈ ವೇಳೆ ಶೋಭಾ ಅವರ ಕಾರು ಚಾಲಕ ಅಕ್ಕ ಪಕ್ಕ ನೋಡದೇ ಏಕಾಏಕಿ ಕಾರಿನ ಡೋರ್‌ ತೆಗೆದಿದ್ದಾನೆ. ಈ ವೇಳೆ ಅದೇ ಸ್ಥಳ ಮಾರ್ಗದಲ್ಲಿ ಬಂದ ಬೈಕ್‌ ಸವಾಕ, ಕಾರು ಡೋರ್‌ ತಗುಲಿ ಕೆಳಗೆ ಬಿದ್ದಿದ್ದಾನೆ.. ಇದೇ ವೇಳೆ ಹಿಂದಿನಿಂದ ಬಂದ ಬಸ್‌ ಆತನ ಮೇಲೆ ಹರಿದಿದ್ದು, ಆಸ್ಪತ್ರೆಯಲ್ಲಿ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸಿಗರೇಟು ಸೇದುತ್ತಿದ್ದನ್ನು ನೋಡಿ ಗುರಾಯಿಸಿದ ವ್ಯಕ್ತಿ; ಪ್ರಾಣವನ್ನೇ ತೆಗೆದ ಯುವತಿ!

35 ವರ್ಷದ ಪ್ರಕಾಶ ಸಾವನ್ನಪ್ಪಿದ ವ್ಯಕ್ತಿ;

ಟಿಸಿ ಪಾಳ್ಯದ ನಿವಾಸಿ 35 ವರ್ಷದ ಪ್ರಕಾಶ್‌ ಸಾವನ್ನಪ್ಪಿದ ಬೈಕ್‌ ಸವಾರ ಎಂದು ತಿಳಿದುಬಂದಿದೆ.. ಬಸ್‌ ಹರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶ್‌ ಅವರನ್ನು ಕೆಆರ್‌ ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದದಾರೆ ಎಂದು ತಿಳಿದುಬಂದಿದೆ.. ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ಈ ಘಟನೆ ನಡೆದಿತ್ತು. ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ; ಧಾರವಾಡದಿಂದ ಅಖಾಡಕ್ಕೆ ಇಳಿಯಲು ದಿಂಗಾಲೇಶ್ವರ ಶ್ರೀ ತೀರ್ಮಾನ; ಪ್ರಹ್ಲಾದ್ ಜೋಶಿಗೆ ಭೀತಿ

 

Share Post