ಬಿಸಿಲಿನಿಂದಾಗಿ ಮರದ ಮೇಲೆ ಪ್ರಜ್ಞೆ ತಪ್ಪಿದ ಯುವಕ; ಮುಂದೇನಾಯ್ತು..?
ಹಾಸನ; ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ.. ಇದರಿಂದಾಗಿ ಜನ ಆಚೆಗೂ ಬರದಂತಹ ಸ್ಥಿತಿ ಏರ್ಪಟ್ಟಿದೆ.. ಇದರ ನಡುವೆ ಹೊಟ್ಟೆಪಾಡಿಗಾಗಿ ಕೆಲಸ ಮಾಡುವವರು ವಿಧಿಯಿಲ್ಲದೆ ಬಿಸಿಲಿನಲ್ಲೇ ಕೆಲಸ ಮಾಡಬೇಕಿದೆ.. ಪ್ರಾಣಹೋಗುವ ಸ್ಥಿತಿಯಲ್ಲೂ ಕಾರ್ಮಿಕರು ಬಿಸಿಲಿನಲ್ಲೇ ದುಡಿಯುತ್ತಿರುತ್ತಾರೆ.. ಹಾಗೆ, ಬಿಸಿಲಿನಲ್ಲೇ ತೆಂಗಿನ ಮರ ಏರಿ ಮರ ಕತ್ತರಿಸುತ್ತಿದ್ದ ಯುವಕ ಅಲ್ಲೇ ಪ್ರಜ್ಞೆ ತಪ್ಪಿರುವ ಘಟನೆ ನಡೆದಿದೆ..
ಇದನ್ನೂ ಓದಿ; ಶೋಭಾ ಕರಂದ್ಲಾಜೆ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಯುವಕನ ಬಲಿ!
ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಯುವಕ;
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿಯಲ್ಲಿ ಗ್ರಾಮದ ಜಮೀನೊಂದರಲ್ಲಿ ಈ ಘಟನೆ ನಡೆದಿದೆ.. ನವೀನ್ ಎಂಬ ಯುವಕ ತೆಂಗಿನ ಮರವೇರಿ ಗರಿಗಳನ್ನು ಕತ್ತರಿಸುತ್ತಿದ್ದ. ಅದೃಷ್ಟವಶಾತ್ ಆತ ಸೊಂಟಕ್ಕೆ ಹಗ್ಗ ಕಟ್ಟಿಕೊಂಡಿದ್ದ.. ಕೆಲಸ ಮಾಡುವಾಗ ಬಿಸಿಲಿಗೆ ಆತ ಅಲ್ಲಿಯೇ ಪ್ರಜ್ಞೆ ತಪ್ಪಿದ್ದಾನೆ.. ಆದ್ರೆ ಹಗ್ಗ ಕಟ್ಟಿದ್ದರಿಂದಾಗಿ ಆತ ಕೆಳಗೆ ಬಿದ್ದಿಲ್ಲ. ಮರೆದ ಮೇಲೆಯೇ ಇದ್ದ.
ಇದನ್ನೂ ಓದಿ; ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಂಗಳಮುಖಿ ಅಖಾಡಕ್ಕೆ..!
ಅಗ್ನಿಶಾಮಕ ಸಿಬ್ಬಂದಿ ಬಂದು ರಕ್ಷಣೆ;
ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸುವಾಗ ಈ ಘಟನೆ ನಡೆದಿದೆ… ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ನವೀನ್ ಪ್ರಜ್ಞೆ ತಪ್ಪಿ ಮರದ ಮೇಲೆಯೇ ಇದ್ದ.. ನಂತರ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.. ಅಗ್ನಿಶಾಮಕ ಸಿಬ್ಬಂದಿ ಮರವೇರಿ ಮರದಲ್ಲಿ ನೇತಾಡುತ್ತಿದ್ದ ನವೀನ್ ಅವರನ್ನು ರಕ್ಷಣೆ ಮಾಡಿದ್ದಾರೆ.. ಸಾವಿನಿಂದ ಪಾರು ಮಾಡಿದ್ದಾರೆ..
ಇದನ್ನೂ ಓದಿ; ಸಿಗರೇಟು ಸೇದುತ್ತಿದ್ದನ್ನು ನೋಡಿ ಗುರಾಯಿಸಿದ ವ್ಯಕ್ತಿ; ಪ್ರಾಣವನ್ನೇ ತೆಗೆದ ಯುವತಿ!