ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದವರ ಪಟ್ಟಿ
ಬೆಂಗಳೂರು: ಡಿಸೆಂಬರ್ 10ರಂದು ರಾಜ್ಯದ 25ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆದಿತ್ತು. ಇಂದು ಎಲ್ಲಾ ಚುನಾವಣಾ ಕ್ಷೇತ್ರಗಳಲ್ಲಿ ಮತಎಣಿಕೆ ಕಾರ್ಯ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಮಬಲದ ಹೋರಾಟ ನಡೆಸಿದೆ. ಆದ್ರೆ ಜೆಡಿಎಸ್ ಮಾತ್ರ ಕ್ಷೇತ್ರ ಗೆಲ್ಲುವಲ್ಲಿ ಮಕಾಡೆ ಮಲಗಿದೆ. ಕೇವಲ ಹಾಸನದಲ್ಲಿ ತಮ್ಮ ಮನೆತನದ ಮಗನನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿ ಹೀನಾಯ ಸೋಲನ್ನು ಜೆಡಿಎಸ್ ಅನುಭವಿಸಿದೆ. ಹಾಗಾದ್ರೆ 25ಕ್ಷೇತ್ರಗಳಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ಹೆಸರನ್ನು ನೋಡುವುದಾದರೆ……
ಕ್ಷೇತ್ರ ಅಭ್ಯರ್ಥಿ ಪಕ್ಷ
ಕೊಡಗು ಸುಜಾ ಕುಶಾಲಪ್ಪ ಬಿಜೆಪಿ
ಬೆಂಗಳೂರು ಗೋಪಿನಾಥ್ ರೆಡ್ಡಿ ಬಿಜೆಪಿ
ಚಿತ್ರದುರ್ಗ ಕೆ.ಎಸ್.ನವೀನ್ ಬಿಜೆಪಿ
ಉತ್ತರ ಕನ್ನಡ ಗಣಪತಿ ಉಳ್ವೇಕರ್ ಬಿಜೆಪಿ
ಬಳ್ಳಾರಿ ವೈ.ಎಂ.ಸತೀಶ್ ಬಿಜೆಪಿ
ಚಿಕ್ಕಮಗಳೂರು ಎಂ.ಕೆ.ಪ್ರಾಣೇಶ್ ಬಿಜೆಪಿ
ಶಿವಮೊಗ್ಗ ಡಿ.ಎಸ್.ಅರುಣ್ ಬಿಜೆಪಿ
ಕಲಬುರ್ಗಿ ಬಿ.ಜಿ.ಪಾಟೀಲ್ ಬಿಜೆಪಿ
ದ. ಕನ್ನಡ ಕೋಟ ಶ್ರೀನಿವಾಸ್ ಪೂಜಾರಿ(ದ್ವಿಸದಸ್ಯ) ಬಿಜೆಪಿ
ಧಾರವಾಡ ಪ್ರದೀಪ್ ಶೆಟ್ಟರ್(ದ್ವಿಸದಸ್ಯ) ಬಿಜೆಪಿ
ವಿಜಯಪುರ ಪಿ.ಎಚ್.ಪೂಚಾರ ಬಿಜೆಪಿ
ಬೀದರ್ ಭೀಮಾರಾಮ್ ಪಾಟೀಲ್ ಕಾಂಗ್ರೆಸ್
ಮಂಡ್ಯ ದಿನೇಶ್ ಗೂಳೀಗೌಡ ಕಾಂಗ್ರೆಸ್
ರಾಯಚೂರು ಶರಣಗೌಡ ಬಯ್ಯಾಪುರ ಕಾಂಗ್ರೆಸ್
ಬೆಂ.ಗ್ರಾಮಾಂತರ ಎಂ.ಎಸ್ ರವಿ ಕಾಂಗ್ರೆಸ್
ಧಾರವಾಡ ಸಲೀಂ ಅಹ್ಮದ್(ದ್ವಿಸದಸ್ಯ) ಕಾಂಗ್ರೆಸ್
ದ. ಕನ್ನಡ ಮಂಜುನಾಥ್ ಬಂಡಾರಿ(ದ್ವಿಸದಸ್ಯ) ಕಾಂಗ್ರೆಸ್
ಬೆಳಗಾವಿ ಚನ್ನರಾಜ ಹೊರಟ್ಟಿ(ದ್ವಿಸದಸ್ಯ) ಕಾಂಗ್ರೆಸ್
ವಿಜಯಪುರ ಸುನೀಲ್ ಗೌಡ ಪಾಟೀಲ(ದ್ವಿಸದಸ್ಯ) ಕಾಂಗ್ರೆಸ್
ಹಾಸನ ಸೂರಜ್ ರೇವಣ್ಣ ಜೆಡಿಎಸ್
ಬೆಳಗಾವಿ ಲಖನ್ ಜಾರಕಿಹೊಳಿ(ದ್ವಿಸದಸ್ಯ) ಪಕ್ಷೇತರ ಅಭ್ಯರ್ಥಿ
ಮೈಸೂರು ಡಾ.ಡಿ.ತಿಮ್ಮಯ್ಯ(ದ್ವಿಸದಸ್ಯ) ಕಾಂಗ್ರೆಸ್
ಮೈಸೂರು ರಘು ಟಿ.ಕೌಟಿಲ್ಯ(ದ್ವಿಸದಸ್ಯ) ಬಿಜೆಪಿ