ಸಿದ್ದರಾಮಯ್ಯ ನಂಬಿಕೆ ದ್ರೋಹಿಗಳ ಋಣ ತೀರಿಸ್ತಿದ್ದಾರೆ; ಸಿ.ಟಿ.ರವಿ
ಕೋಲಾರ; ಸಿಎಂ ಸಿದ್ದರಾಮಯ್ಯನವರು ನಂಬಿಕೆ ದ್ರೋಹಿಗಳ ಋಣ ತೀರಿಸಲು ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ರಾಜರ ಅರಮನೆ ಹಾಳು ಮಾಡಿದವರ ಋಣ ತೀರಿಸಬೇಕು ಅಂತೀರಿ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಟಿಪ್ಪುವಿನ ಖಡ್ಗ ಇಟ್ಟುಕೊಂಡು ಓಡಾಡುವ ನಿಮಗೆ ಇಷ್ಟು ಇರಬೇಕಾದ್ರೆ, ಟಿಪ್ಪು ಹತ್ಯೆ ಮಾಡಿದ ಉರಿಗೌಡ, ನಂಜೇಗೌಡನ ವಂಶಸ್ಥರು ನಾವು. ನಮಗೆ ಇನ್ನೆಷ್ಟು ಇರಬೇಡಾ? ಎಂದ ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.