ಕುಮಾರಸ್ವಾಮಿಗೆ ಸಿಗುತ್ತಾ ಕೃಷಿ ಖಾತೆ..?; ಬಿಜೆಪಿ ಪ್ಲ್ಯಾನ್ ಒಪ್ತಾರಾ ನಿತೀಶ್, ಚಂದ್ರಬಾಬು..?
ನವದೆಹಲಿ; ನಾಳೆ ಸಂಜೆ 7.15ಕ್ಕೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.. ಅವರ ಜೊತೆ ಒಂದಷ್ಟು ನಾಯಕರು ಕೂಡಾ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.. ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಆಗುತ್ತಿಲ್ಲವಾದ್ದರಿಂದ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸುತ್ತಿದೆ.. ಹೀಗಾಗಿ, ಕಿಂಗ್ ಮೇಕರ್‌ಗಳಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.. ಇದರ ನಡುವೆ, ಬಿಜೆಪಿ ಖಾತೆ ಹಾಗೂ ಸಚಿವ ಸ್ಥಾನಗಳ ಹಂಚಿಕೆ ವಿಚಾರದಲ್ಲಿ ದಿಟ್ಟ ನಿಲುವು ತಾಳಿದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಬಿಜೆಪಿ ನಿಲುವನ್ನು ಮಿತ್ರಪಕ್ಷಗಳು ಒಪ್ಪುತ್ತವಾ ಎಂಬುದರ ಬಗ್ಗೆ ಕುತೂಹಲ ಇದೆ.. ಇತ್ತ ಜೆಡಿಎಸ್ ಬೆಂಬಲದಿಂದಾಗಿ ರಾಜ್ಯದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ.. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರಿಗೆ ಕೃಷಿಯಂತಹ ಪ್ರಮುಖ ಖಾತೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ..
81 ಕ್ಯಾಬಿನೆಟ್ ದರ್ಜೆ ಸಚಿವರನ್ನು ಆಯ್ಕೆ ಮಾಡುವ ಅವಕಾಶವಿದ್ದು, ಇದರಲ್ಲಿ ಪ್ರಮುಖ ಖಾತೆಗಳ ಮೇಲೆ ಟಿಡಿಪಿ ಹಾಗೂ ಜೆಡಿಯು ಪಕ್ಷಗಳು ಕಣ್ಣಿಟ್ಟಿವೆ.. ಆದ್ರೆ ಬಿಜೆಪಿ ಮಾತ್ರ ಎರಡೂ ಪಕ್ಷಗಳಿಗೆ ಎರಡೆರಡು ಖಾತೆಗಳನ್ನು ಮಾತ್ರ ಕೊಡೋಕೆ ಸಿದ್ಧವಾಗಿದೆ ಎನ್ನಲಾಗ್ತಿದೆ.. ಜೊತೆಗೆ ಪ್ರಮುಖ ಖಾತೆಗಳೆಲ್ಲವನ್ನೂ ಬಿಜೆಪಿಯೇ ಇಟ್ಟುಕೊಳ್ಳಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ..
ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳುತ್ತಾ ಬಿಜೆಪಿ..?
ಗೃಹ
ಹಣಕಾಸು
ರೇಲ್ವೆ
ರಕ್ಷಣಾ
ರಸ್ತೆ-ಹೆದ್ದಾರಿ
ವಿದೇಶಾಂಗ
ಕಾನೂನು, ಐಟಿ
ಶಿಕ್ಷಣ
ಸ್ಪೀಕರ್
ಇಷ್ಟೂ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.. ಚಂದ್ರಬಾಬು ನೇತೃತ್ವದ ಟಿಡಿಪಿ ಪಕ್ಷಕ್ಕೆ ಕ್ಯಾಬಿನೆಟ್ ಸ್ಥಾನಮಾನದ ನಾಗರಿಕ ವಿಮಾನಯಾನ ಖಾತೆ, ಉಕ್ಕು ಇಲಾಖೆಯ ರಾಜ್ಯ ಖಾತೆ ಹಾಗೂ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಒಂದು ಕ್ಯಾಬಿನೆಟ್ ದರ್ಜೆ ಹಾಗೂ ಒಂದು ರಾಜ್ಯ ಖಾತೆ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.. ಇನ್ನು ಶಿವಸೇನೆ (ಏಕನಾಥ್ ಶಿಂಧೆ ಬಣ), ಎಲ್‌ಜೆಪಿಗೂ ಎರಡು ಖಾತೆಗಳನ್ನು, ಪವನ್ ಕಲ್ಯಾಣ್‌ರ ಜನಸೇನಾ, ಆರ್‌ಎಲ್‌ಡಿ ಮುಂತಾದ ಸಣ್ಣ ಪಕ್ಷಗಳಿಗೆ ಒಂದೊಂದು ಖಾತೆಯನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ..