ಬಿಜೆಪಿ ಪರ ರೀಲ್ಸ್ ಮಾಡಿ; ಮೋದಿ ಭೇಟಿಗೆ ಅವಕಾಶ ಪಡೆಯಿರಿ – ಬಿಜೆಪಿಯ ಹೊಸ ಕ್ಯಾಂಪೇನ್
ಬೆಂಗಳೂರು; ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗಲಿದೆ.. ಇದರ ನಡುವೆ ಎಲ್ಲಾ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿವೆ.. ಬಿಜೆಪಿ ಈಗಾಗಲೇ ತಮ್ಮ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 195 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.. ಇನ್ನು ಕರ್ನಾಟಕದಲ್ಲಿ ಬಿಜೆಪಿ ವಿನೂತನ ಪ್ರಚಾರಕ್ಕೆ ಮುಂದಾಗಿದೆ.. ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಂದಲೇ ಹೇಳಿಸಿ, ಆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಸೋಷಿಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ ಏರ್ಪಡಿಸಿದೆ.
ಇದನ್ನೂ ಓದಿ;Health Benefits; ದಿನಾ ಹೀಗೆ ಮಾಡಿ, ಯಾವ ರೋಗವೂ ನಿಮ್ಮ ಹತ್ತಿರ ಬರೋಲ್ಲ..!
ರೀಲ್ಸ್ ಮಾಡಿ, ಮೋದಿ ಭೇಟಿಯಾಗಿ;
ರೀಲ್ಸ್ ಮಾಡಿ, ಮೋದಿ ಭೇಟಿಯಾಗಿ; ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಿ ಮಾಧ್ಯಮವಾಗಿದೆ.. ಸೋಷಿಯಲ್ ಮೀಡಿಯಾ ಮೂಲಕ ಬಹುಬೇಗ ಪ್ರಚಾರ ನಡೆಯಬಹುದಾಗಿದೆ.. ಇದನ್ನು ಅರಿತ ಬಿಜೆಪಿ ರೀಲ್ಸ್ ಕಂಪೀಟಿಷನ್ ಶುರು ಮಾಡಿದೆ. ಹೊಸ ಮತದಾರರು ಹಾಗೂ ಯುವ ಸಮುದಾಯವನ್ನು ಬಿಜೆಪಿಯತ್ತ ಸೆಳೆಯೋದಕ್ಕೆ ಬಿಜೆಪಿ ಈ ಪ್ಲ್ಯಾನ್ ಮಾಡಿದೆ.. ನಮೋ ಯುವ ಭಾರತ ಫೆಲೋಶಿಫ್ ಕಾರ್ಯಕ್ರಮದಡಿ ಈ ರೀಲ್ಸ್ ಕಾಂಪಿಟಿಷನ್ ಏರ್ಪಡಿಸಲಾಗಿದ್ದು, ಹೆಚ್ಚು ಲೈಕ್ಸ್ ಪಡೆಯುವ 10 ರೀಲ್ಸ್ ಮಾಡಿದವರಿಗೆ ಮೋದಿ ಭೇಟಿ ಮಾಡಿಸುವ ಅವಕಾಶವನ್ನು ಒದಗಿಸಿಕೊಡಲಾಗುತ್ತಿದೆ.
ಇದನ್ನೂ ಓದಿ; ರಾಜ್ಯದ 14 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್; ಇಂದೇ ಮೊದಲ ಪಟ್ಟಿ ರಿಲೀಸ್!
ಕೇಂದ್ರದ ಯೋಜನೆ, ಅಭಿವೃದ್ಧಿ ಬಗ್ಗೆ ರೀಲ್ಸ್ ಮಾಡಬೇಕು;
ಕೇಂದ್ರದ ಯೋಜನೆ, ಅಭಿವೃದ್ಧಿ ಬಗ್ಗೆ ರೀಲ್ಸ್ ಮಾಡಬೇಕು; ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ರೀಲ್ಸ್ ಮಾಡಬೇಕು. ಬಿಜೆಪಿಗೆ ಯಾಕೆ ಮತ ನೀಡಬೇಕು ಎಂಬುದರ ಕುರಿತು ಸರಿಯಾದ ಮಾಹಿತಿ ನೀಡಬೇಕು.. ಹಾಗೆ ಮಾಡಿದ ರೀಲ್ಸ್ ಅನ್ನು ಬಿಜೆಪಿ ಯುವ ಮೋರ್ಚಾ ತನ್ನ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಿದೆ. ಅಷ್ಟೇ ಅಲ್ಲದೇ ಅತ್ಯುತ್ತಮವಾಗಿರುವ ಮೂರು ರೀಲ್‌ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ;ಕೊಡಗು-ಮೈಸೂರು ಕ್ಷೇತ್ರಕ್ಕೆ ಯಧುವೀರ್ ಬಿಜೆಪಿ ಅಭ್ಯರ್ಥಿಯಾಗ್ತಾರಾ..?
ಒಂದು ತಿಂಗಳ ಕಾಲ ನಡೆಯುವ ಸ್ಪರ್ಧೆ;
ಒಂದು ತಿಂಗಳ ಕಾಲ ನಡೆಯುವ ಸ್ಪರ್ಧೆ; ಒಂದು ತಿಂಗಳ ಕಾಲ ಈ ಸ್ಪರ್ಧೆ ನಡೆಯಲಿದೆ. 90 ಸೆಕೆಂಡ್‌ಗಳ ರೀಲ್ಸ್ ಮಾಡಬೇಕಾಗಿದ್ದು, ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ ಎಂಬ 4 ವಿಭಾಗಗಳಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಬಗ್ಗೆ ರೀಲ್ಸ್ ಮಾಡಬಹುದು. ಬಿಜೆಪಿ ಯುವ ಮೋರ್ಚಾ ಈ ಕಾಂಪಿಟಿಷನ್ ಇಟ್ಟಿದ್ದು, ಮೋದಿ ಕರ್ನಾಟಕಕ್ಕೆ ಬಂದಾಗಿ, ಅತ್ಯುತ್ತಮ ರೀಲ್ಸ್ ಮಾಡಿದ ಹತ್ತು ಮಂದಿಯನ್ನು ಮೋದಿ ಭೇಟಿ ಮಾಡಿಸುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ;Rameshwaram Cafe Case; ಆರೋಪಿ ಧರಿಸಿದ್ದ ಟೋಪಿ ಪತ್ತೆ; ಶಂಕಿತನ ಬಗ್ಗೆ ಮಹತ್ವದ ಸುಳಿವು!