CrimePolitics

ಈ ಪೋಲಿ ಮುಖ್ಯ ಶಿಕ್ಷಕನಿಗೆ ಶಿಕ್ಷಕಿಯ ಸಿಹಿಮುತ್ತು ಬೇಕಂತೆ!

ಉನ್ನಾವೋ (ಉತ್ತರಪ್ರದೇಶ); ಮುಖ್ಯ ಶಿಕ್ಷಕ ಶಾಲೆಯ ಹೆಡ್‌.. ಅಲ್ಲಿನ ಎಲ್ಲಾ ಆಗುಹೋಗುಗಳನ್ನು ನಿಭಾಯಿಸಬೇಕು.. ಆದ್ರೆ, ಇಲ್ಲೊಬ್ಬ ಮುಖ್ಯ ಶಿಕ್ಷಕ ತನ್ನ ಶಾಲೆಯ ಶಿಕ್ಷಕಿಯಿಂದ ಸಿಹಿಮುತ್ತು ಕೇಳಿದ್ದಾನೆ.. ಅಟೆಂಡೆನ್ಸ್‌ ಕೊಡೋದಕ್ಕಾಗಿ ಕೆನ್ನೆಗೊಂದು ಸಿಹಿಮುತ್ತು ಕೊಡುವಂತೆ ಶಿಕ್ಷಕಿಗೆ ಕೇಳಿದ್ದಾನೆ.. ಮುಖ್ಯಶಿಕ್ಷಕನ ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲಾಗಿದೆ.. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಮೆಟ್ರೋ ಫ್ಲೈಓವರ್‌ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ!

ಉತ್ತರ ಪ್ರದೇಶದ ಉನ್ನಾವೋದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.. ಮಮತಾ ತ್ರಿಪಾಠಿ ಎಂಬುವವರು ಎಕ್ಸ್‌ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದು, ಕಾಮುಕ ಶಿಕ್ಷಕನ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.. ಈ ವಿಡಿಯೋ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕರ ಬಳಿ ಬಂದು ಸರ್‌ ಅಟೆಂಡೆನ್ಸ್‌ ಕೊಡುವಂತೆ ಕೇಳುತ್ತಾರೆ.. ನಾನು ಹೇಳಿದ್ದು ಕೇಳಿದರೆ ನಿಮಗೆ ಫುಲ್‌ ಅಟೆಂಡೆನ್ಸ್‌ ಕೊಡುತ್ತೇನೆ ಎಂದು ಹೇಳಿದ್ದಾರೆ. ಏನು ಅಂತ ಕೇಳಿದರೆ ಕೆನ್ನೆ ಮೇಲೆ ಮುತ್ತು ಕೊಡು ಎಂದು ಕೇಳುತ್ತಾರೆ.. ಅದಕ್ಕೆ ಶಿಕ್ಷಕಿ ಆಗೋದಿಲ್ಲ ಎಂದಿದ್ದಾರೆ..

ಇದನ್ನೂ ಓದಿ; ಇಂತಹ ಸ್ನೇಹಿತರನ್ನು ಎಂದಿಗೂ ಜೊತೆಗಿಟ್ಟುಕೊಳ್ಳಬೇಡಿ; ಇವರು ಎಂದಿಗೂ ಡೇಂಜರ್‌!

Share Post