PoliticsSports

ಕುಸ್ತಿಪಟುಗಳ ಜೊತೆ ಅಖಾಡಕ್ಕಿಳಿದ ರಾಹುಲ್‌ಗಾಂಧಿ

ನವದೆಹಲಿ; ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕುಸ್ತಿಪಟುಗಳ ಜತೆ ಅಖಾಡಕ್ಕಿಳಿದಿದ್ದಾರೆ. ಅದರ ವಿಡಿಯೋ ಹಾಗೂ ಫೋಟೋಗಳು ಸಖತ್‌ ವೈರಲ್‌ ಆಗುತ್ತಿವೆ. ರಾಹುಲ್‌ ಗಾಂಧಿಯವರು ಹರ್ಯಾಣದ ಜಜ್ಜರ್‌ ಜಿಲ್ಲೆಯ ಛಾರಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಕುಸ್ತಿಪಟುಗಳ ಜೊತೆ ಕುಸ್ತಿ ಆಟ ಆಡಿದ್ದಾರೆ.

ಛಾರಾ ಗ್ರಾಮವು ಕುಸ್ತಿಪಟು ದೀಪಕ್ ಪುನಿಯಾ ಅವರ ಗ್ರಾಮವಾಗಿದೆ. ಈ ಸಂದರ್ಭದಲ್ಲಿ, ರಾಹುಲ್ ಗಾಂಧಿ ಜೊತೆಗೆ ಬಜರಂಗ್ ಪುನಿಯಾ ಮತ್ತು ಬೇರಿ ಶಾಸಕ ರಘುಬೀರ್ ಕಡಿಯನ್ ಕೂಡ ಉಪಸ್ಥಿತರಿದ್ದರು.

ಅಖಾಡಕ್ಕೆ ಆಗಮಿಸಿದ ರಾಹುಲ್‌ಗೆ ಕುಸ್ತಿಪಟುಗಳು ಅದ್ಧೂರಿ ಸ್ವಾಗತ ನೀಡಿದರು.

Share Post