Modi Road Show; ಮೋದಿ ಬೆಂಗಳೂರು ರೋಡ್ ಶೋ ಮ್ಯಾಪ್ ಮತ್ತೆ ಬದಲಾವಣೆ
ಬೆಂಗಳೂರು; ಬೆಂಗಳೂರಿನಲ್ಲಿ ನಡೆಯುವ ಮೋದಿ ರೋಡ್ ಶೋ ರೂಟ್ ಮ್ಯಾಪ್ ಮತ್ತೆ ಬದಲಾವಣೆಯಾಗಿದೆ. ಶನಿವಾರ ನಡೆಯಬೇಕಿದ್ದ ಸ್ಥಳಗಳಲ್ಲಿ ಭಾನುವಾರ, ಭಾಗವಾರ ನಡೆಯಬೇಕಿದ್ದ ಸ್ಥಳಗಳಲ್ಲಿ ಶನಿವಾರ ರೋಡ್ ಶೋ ನಡೆಯಲಿದೆ. ಜೊತೆಗೆ ಕೊಂಚ ದೂರವನ್ನು ಕಡಿತ ಕೂಡಾ ಮಾಡಲಾಗಿದೆ.
ಮೊದಲು ಸಮಯ ನಿಗದಿ ಮಾಡಿದಾಗ ಶನಿವಾರ ಒಂದೇ ದಿನ ಎರಡು ಹಂತಗಳಲ್ಲಿ ಸುಮಾರು 40 ಕಿಲೋ ಮೀಟರ್ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ, ಟ್ರಾಫಿಕ್ ಜಾಮ್ ಉಂಟಾಗಿ ಜನರಿಗೆ ತೊಂದರೆಯಾಗುತ್ತೆ ಅನ್ನೋ ಉದೇಶದಿಂದ ಎರಡು ದಿನಗದಲ್ಲಿ ನಲವತ್ತು ಕಿಲೋ ಮೀಟರ್ ರೋಡ್ ಶೋ ನಡೆಸಲು ನಿರ್ಧರಿಸಲಾಗಿತ್ತು. ಶನಿವಾರ ಬೆಳಗ್ಗೆ ಹತ್ತೂವರೆ ಕಿಲೋ ಮೀಟರ್ ರೋಡ್ ನಡೆಸಿದರೆ, ಭಾನುವಾರ ಬೆಳಗ್ಗೆ 29.5 ಕಿಲೋ ಮೀಟರ್ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ರೂಟ್‌ಮ್ಯಾಪ್ ಕೂಡಾ ರೆಡಿಯಾಗಿತ್ತು. ಆದ್ರೆ, ಭಾನುವಾರ ನೀಟ್ ಪರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತ್ತೆ ರೂಟ್ ಮ್ಯಾಪ್ ಬದಲಿಸಲಾಗಿದೆ.
ಈಗ ಮೇ 6ರ ಶನಿವಾರ 26 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ 12:30 ರವರೆಗೆ ರೋಡ್ ಶೋ ನಡೆಯಲಿದ್ದು, ಜೆಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ ಮೋದಿಯವರ ರೋಡ್ ಶೋ ನಡೆಯಲಿದೆ. ಇನ್ನು ಭಾನುವಾರ ಒಂದೂವರೆ ಗಂಟೆ ರೋಡ್ ಶೋ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ರೋಡ್ ಶೋ ನಡೆಯಲಿದ್ದು, ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್‌ವರೆಗೆ ಈ ರೋಡ್ ಶೋ ನಡೆಯಲಿದೆ. ಈ ಹಿಂದೆ ಇದ್ದ ಮ್ಯಾಪ್‌ನಲ್ಲಿ 4 ಕಿಲೋಮೀಟರ್ ಕಡಿತ ಮಾಡಲಾಗಿದೆ.
ಮೆಡಿಕಲ್ ಪ್ರವೇಶ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕಿತ್ತು. ಆದ್ರೆ ಮೋದಿ ಬರುವುದರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ. ಹವಲು ರೋಡ್‌ಗಳನ್ನೂ ಬಂದ್ ಮಾಡಲಾಗಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕ ಎದುರಿಸುತ್ತಿದ್ದರು. ಇದನ್ನು ಮನಗಂಡ ಬಿಜೆಪಿ ನಾಯಕರು, ಈ ಹಿಂದೆ ನಿಗದಿಯಾಗಿದ್ದ ರೋಡ್ ಶೋಗಳನ್ನು ಅದಬದಲು ಮಾಡಿ, ದೂರವನ್ನೂ ಕಡಿಮೆ ಮಾಡಿದ್ದಾರೆ.