Politics

ಇದು ಮೋದಿ ಸರ್ಕಾರದ ಶೂನ್ಯ ಮೊತ್ತದ ಬಜೆಟ್‌ : ರಾಹುಲ್‌ ಗಾಂಧಿ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದ ಬಜೆಟ್‌ ಅನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

ಇದು ಮೋದಿ ಸರ್ಕಾರದ ಶೂನ್ಯ ಮೊತ್ತದ ಬಜೆಟ್‌ ಆಗಿದೆ. ಇದರಲ್ಲಿ ಸಂಬಳದಾರರಿಗೆ, ಮಧ್ಯಮ ವರ್ಗದವರಿಗೆ, ಬಡವರಿಗೆ, ಯುವಕರಿಗೆ, ರೈತರಿಗೆ, MSME ಇನ್ನು ಮುಂತಾದವರಿಗೆ ಏನೂ ಇಲ್ಲ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ರಾಹುಲ್‌ ಅವರು ಪೋಸ್ಟ್‌ ಹಾಕಿದ್ದಾರೆ.

Share Post