Politics

ಪ್ರಜ್ವಲ್‌ ದೇಶದಿಂದ ಹೊರಹೋಗಲು ಬಿಟ್ಟಿದ್ದು ಕಾಂಗ್ರೆಸ್‌; ಪ್ರಧಾನಿ ಮೋದಿ

ನವದೆಹಲಿ; ಕರ್ನಾಟಕ ಸರ್ಕಾರವೇ ಪ್ರಜ್ವಲ್‌ ರೇವಣ್ಣನನ್ನು ಹೊರದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ.. ನಾವು ಪ್ರಜ್ವಲ್‌ ರೇವಣ್ಣರಂತಹ ವ್ಯಕ್ತಿಗಳನ್ನು ಯಾವತ್ತಿಗೂ ಸಹಿಸುವುದಿಲ್ಲ.. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.. ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಇಂತಹ ವ್ಯಕ್ತಿಗಳನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ..
ಪ್ರಜ್ವಲ್‌ ರೇವಣ್ಣ ಪ್ರಕರಣ ಕಾನೂನು ಹಾಗೂ ಸುವ್ಯವಸ್ಥೆಗೆ ಸಂಬಂಧಿಸಿದ್ದು.. ಕ್ರಮ ಜರುಗಿಸುವ ಅಧಿಕಾರಿ ರಾಜ್ಯ ಸರ್ಕಾರಕ್ಕಿದೆ.. ಆದ್ರೆ ಅವರೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಅವಕಾಶ ಮಾಡಿಕೊಟ್ಟಿದ್ದಾರೆ.. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಇದ್ದ ಸಂದರ್ಭದಲ್ಲಿ ಈ ವಿಡಿಯೋಗಳು ರೆಕಾರ್ಡ್‌ ಆಗಿವೆ.. ಅವುಗಳನ್ನು ಎಲ್ಲಾ ಒಟ್ಟುಗೂಡಿಸಿಕೊಂಡು ಈಗ ಲೋಕಸಭಾ ಚುನಾವಣೆ ವೇಳೆ ಬಿಟ್ಟಿದ್ದಾರೆ.. ಅದೂ ಕೂಡಾ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಈ ರೀತಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ..
ಕಾಂಗ್ರೆಸ್‌ ಸರ್ಕಾರದವರು ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಹೊರದೇಶಕ್ಕೆ ಹೋಗುವಾಗ ತಡೆಯಲಿಲ್ಲ.. ಕನಿಷ್ಠ ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೂಡಾ ಕೊಡಲಿಲ್ಲ.. ಇದೊಂದು ಪೊಲಿಟಿಕಲ್‌ ಗೇಮ್‌ ಎಂದು ನರೇಂದ್ರ ಮೋದಿಯವರು ಜರಿದಿದ್ದಾರೆ..

Share Post