CrimeDistricts

ಹಾಡಹಗಲೇ ಗುಂಡಿನ ದಾಳಿ; ವಿಜಯಪುರದಲ್ಲಿ ಪಾಲಿಕೆ ಸದಸ್ಯೆ ಪತಿ ಕೊಲೆ

ವಿಜಯಪುರ; ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳು ಪಾಲಿಕೆ ಸದಸ್ಯೆಯ ಪತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ವಿಜಯಪುರದ ವಾರ್ಡ್ ನಂಬರ್ 19ರ ಪಾಲಿಕೆ ಸದಸ್ಯೆ ನಿಶಾತ್ ಹೈದರ್ ನದಾಫ್ ಅವರ ಪತಿ ರೌಡಿಶೀಟರ್ ಹೈದರ್ ನದಾಫ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ವಿಜಯಪುರ ನಗರದ ಚಾಂದ್‌ಪುರ ಕಾಲೋನಿಯಲ್ಲಿ ಈ ಕೃತ್ಯ ಎಸಗಲಾಗಿದೆ. ನದಾಫ್‌ ಮೇಲೆ ದುಷ್ಕರ್ಮಿಗಳು ಆರು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿ ನದಾಫ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ವಿಜಯಪುರದ ಜನ ಬೆಚ್ಚಿಬಿದ್ದಿದ್ದಾರೆ. ಕೃತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post