LifestylePolitics

ಜೈಲಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಜ್ವಲ್‌ ರೇವಣ್ಣ; ಯಾರ್ಯಾರು ಇದ್ದರು ಗೊತ್ತಾ..?

ಬೆಂಗಳೂರು; ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.. ಅವರು ಜೈಲಿನಲ್ಲಿಯೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.. ಸೋಮವಾರ ಪ್ರಜ್ವಲ್‌ ರೇವಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಹೋದರ ಸೂರಜ್‌ ರೇವಣ್ಣ ಜೈಲಿಗೆ ಭೇಟಿ ನೀಡಿ ಸಹೋದರನಿಗೆ ಶುಭಾಶಯ ಕೋರಿದ್ದಾರೆ..

ಇದನ್ನೂ ಓದಿ; ಸಿಸಿಬಿ ಇನ್ಸ್‌ಪೆಕ್ಟರ್‌ ತಿಮ್ಮೇಗೌಡ ಆತ್ಮಹತ್ಯೆ!; ಅಮಾನತಾಗಿದ್ದರಿಂದ ಖಿನ್ನತೆ!

ಸಹೋದರನಿಗೆ ಶುಭ ಕೋರಿದ ಸೂರಜ್‌ ರೇವಣ್ಣ, ಶೀಘ್ರದಲ್ಲೇ ಜಾಮೀನು ಸಿಗಲಿದೆ.. ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನು ನಿನ್ನೆ ಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಗಿದೆ.. ಆದ್ರೆ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

Share Post