CrimeDistricts

ಫೋರಂ ಮಾಲ್‌ ಬಳಿ ಯುವತಿಗೆ ಲೈಂಗಿಕ ಕಿರುಕುಳ; ನಾಲ್ವರ ಅರೆಸ್ಟ್‌!

ಮಂಗಳೂರು; ಫೋರಂ ಮಾಲ್‌ ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಆಕೆಯ ಎದೆ ಭಾಗಕ್ಕೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.. ಮಂಗಳೂರಿನ ಪಾಂಡೆಶ್ವರದಲ್ಲಿರುವ ಫೋರಂ ಮಾಲ್‌ನಲ್ಲಿ ಈ ಘಟನೆ ನಡೆದಿದೆ.. ಮಾಲ್‌ನಲ್ಲಿರುವ ಶೆರ್ಲಾಕ್‌ ಪಬ್‌ನಲ್ಲಿ ಈ ಕೃತ್ಯ ಎಸಗಲಾಗಿದ್ದು, ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

ಪಡ್ನೂರಿನ ಪ್ರೀತೇಶ್‌, ಪರಿಸರ ನಿವಾಸಿ ನಿತೆಶ್‌, ಪುತ್ತೂರು ನೆಹರೂ ನಗರದ ವಿನಯ್‌ ಹಾಗೂ ಮಹೇಶ್‌ ಬಂಧಿತ ಆರೋಪಿಗಳಾಗಿದ್ದಾರೆ.. ಇವರು ಶೆರ್ಲಾಕ್‌ ಪಬ್‌ನಲ್ಲಿದ್ದ ವೇಳೆ ಯುವತಿಯೊಬ್ಬಳು ಪಬ್‌ಗೆ ಆಗಮಿಸಿದ್ದಾಳೆ.. ಈ ವೇಳೆ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.. ಜೊತೆ ಮೈಕೈ, ಎದೆಭಾಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ತನಗೆ ಹಾಗೂ ಗೆಳತಿಗೆ ಬಿಯರ್‌ ಬಾಟಲ್‌ನಲ್ಲಿ ಹಲ್ಲೆ ಮಾಡಿದ್ದಾರೆ ಎಂದೂ ಯುವತಿ ಆರೋಪ ಮಾಡಿದ್ದಾಳೆ.. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಪೋಸ್ಟಾಫೀಸ್‌ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!

Share Post