Politics

ಹಾಸನದಲ್ಲಿ ಪ್ರಜ್ವಲ್‌ ಗೆಲ್ಲೋದು ಪಕ್ಕಾ!; ಬೆಂಗಳೂರು ಗ್ರಾಮಾಂತರದಲ್ಲಿ ಫಿಫ್ಟಿ ಫಿಫ್ಟಿ!

ಬೆಂಗಳೂರು; ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಈ ಬಾರಿಯೂ ಗೆಲ್ಲೋದು ಪಕ್ಕಾ ಎಂದು ಹೇಳಲಾಗುತ್ತಿದೆ.. ಬಹುತೇಕ ಸಮೀಕ್ಷೆಗಳು ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಹೇಳುತ್ತಿವೆ.. ಆಕ್ಸಿಸ್‌ ಮೈ ಇಂಡಿಯಾ ಸೇರಿ ಹಲವು ಸಮೀಕ್ಷೆಗಳು ಇದನ್ನೇ ಹೇಳಿವೆ.. ಹೀಗಾಗಿ ಕುತೂಹಲ ಕೆರಳಿಸಿದೆ..

ಹಾಸನದಲ್ಲಿ ಮತದಾನಕ್ಕೂ ಎರಡು ಮೂರು ದಿನಗಳ ಮುಂದೆ ಸಾವಿರಾರು ಪೆನ್‌ಡ್ರೈವ್‌ಗಳನ್ನು ಹಂಚಲಾಗಿತ್ತು.. ಅದ್ರಲ್ಲಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳಿದ್ದವು.. ಈ ಹಿನ್ನೆಲೆಯಲ್ಲಿ ಹಾಸನದ ಜನ ಕಾಂಗ್ರೆಸ್‌ಗೆ ಮತ ಹಾಕಿರಬಹುದು ಎಂದು ಎಲ್ಲರೂ ಭಾವಿಸಿದ್ದರು.. ಆದ್ರೆ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಪ್ರಜ್ವಲ್‌ ರೇವಣ್ಣ ಅವರೇ ಈ ಬಾರಿಯೂ ಗೆಲ್ಲಬಹುದು ಎಂದು ಹೇಳುತ್ತಿವೆ..

ಒಂದು ವೇಳೆ ಪ್ರಜ್ವಲ್‌ ರೇವಣ್ಣ ಅವರು ಗೆದ್ದರೂ ಅವರನ್ನು ಸಂಸದರಾಗಿ ಮುಂದುವರೆಸೋದು ಕಷ್ಟ.. ಅವರಿಂದ ರಾಜೀನಾಮೆ ಪಡೆದು ಉಪಚುನಾವಣೆಯಲ್ಲಿ ಬೇರೊಬ್ಬರನ್ನು ಅಖಾಡಕ್ಕಿಳಿಸುವ ಸಾಧ್ಯತೆ ಬಗ್ಗೆಯೂ ಮಾತನಾಡುತ್ತಿದ್ದಾರೆ..

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್‌ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್‌.ಮಂಜುನಾಥ್‌ ಕಣದಲ್ಲಿದ್ದಾರೆ.. ಹೀಗಾಗಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇದ್ದೇ ಇದೆ.. ಸಮೀಕ್ಷೆಗಳ ಪ್ರಕರಣ ಇಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಹೇಳೋದು ಕಷ್ಟ ಎಂದು ಹೇಳಲಾಗುತ್ತಿದೆ..

Share Post