Politics

Breaking; ಮಂಡ್ಯದಲ್ಲಿ ಕುಮಾರಸ್ವಾಮಿಗೆ 1 ಲಕ್ಷದ 30 ಸಾವಿರ ಮತಗಳ ಭಾರೀ ಮುನ್ನಡೆ!

ಮಂಡ್ಯ; ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಕುಮಾರಸ್ವಾಮಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ಎಲ್ಲಾ ಸಾಧ್ಯತೆ ಇದೆ.. ಈಗಾಗಲೇ ನಾಲ್ಕು ಸುತ್ತಿನ ಮತದಾನ ಮುಕ್ತಾಯವಾಗಿದ್ದು, ಜೆಡಿಎಸ್‌ನ ಕುಮಾರಸ್ವಾಮಿಯವರು 1 ಲಕ್ಷದ 30 ಸಾವಿರ ಮತಗಳ ಭಾರೀ ಅಂತರದ ಮುನ್ನಡೆ ಪಡೆದುಕೊಂಡಿದ್ದಾರೆ..

ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರು ಮೊದಲ ಹಂತದಿಂದಲೂ ಹಿನ್ನೆಡೆ ಸಾಧಿಸುತ್ತಾ ಬಂದಿದ್ದಾರೆ.. ಕುಮಾರಸ್ವಾಮಿಯವರು ಪ್ರತಿ ಸುತ್ತಿನಲ್ಲೂ ಅಂತರವನ್ನು ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ.. ಹೀಗಾಗಿ ಮಂಡ್ಯದಲ್ಲಿ ಕುಮಾರಸ್ವಾಮಿಯವರು ಜಯ ಸಾಧಿಸೋದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ..

ಸದ್ಯದ ಮಾಹಿತಿ ಪ್ರಕಾರ ಕರ್ನಾಟಕರಲ್ಲಿ ಬಿಜೆಪಿ 18 ಹಾಗೂ ಕಾಂಗ್ರೆಸ್‌ 7 ಹಾಗೂ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಾಗಿದೆ..

Share Post