DistrictsPolitics

ದಶಪಥ ರಸ್ತೆ ಲೋಕಾರ್ಪಣೆ ಮಾಡಿದ ಮೋದಿ; ಮಂಡ್ಯದಲ್ಲಿ ರೋಡ್‌ ಶೋ

ಮಂಡ್ಯ; ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರು-ಮೈಸೂರು ದಶಪಥ ರಸ್ತೆಯನ್ನು ಲೋಕಾರ್ಪಣೆ ಮಾಡಿದರು. ಇದಕ್ಕೂ ಮೊದಲು ಅವರು ಮಂಡ್ಯದಲ್ಲಿ ಸುಮಾರು ಎರಡು ಕಿಲೋ ಮೀಟರ್‌ನಷ್ಟು ರೋಡ್‌ ಶೋ ನಡೆಸಿದರು.

ಇದೇ ಮೊದಲ ಬಾರಿಗೆ ಮೋದಿಯವರು ಮಂಡಕ್ಕೆ ಆಗಮಿಸಿದ್ದು, ಮೋದಿಯವರನ್ನು ನೋಡಲು ಜನ ಕಿಕ್ಕಿರಿದು ತುಂಬಿದ್ದರು. ಮಂಡ್ಯದ ಪ್ರವಾಸಿಮಂದಿರದ ಬಳಿಯ ಸರ್ಕಲ್‌ನಿಂದ ನಂದಾ ಸರ್ಕಲ್‍ವರೆಗೆ ಮೋದಿ ರೋಡ್‍ ಶೋ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಮೇಲೆ ಹೂಮಳೆ ಸುರಿಸಲಾಯಿತು.

ಇದೇ ವೇಳೆ ಪ್ರಧಾನಿ ಮೋದಿಯವರು ಬಂದಿದ್ದ ಅಭಿಮಾನಿಗಳ ಮೇಲೆ ಹೂವು ಎರಚಿದರು. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿಯವರು ಜನರತ್ತ ಕೈಬೀಸಿದರು.

Share Post