DistrictsPolitics

ಸಿದ್ದರಾಮಯ್ಯ ಸ್ಪರ್ಧೆ ಮಾಡಲಿರುವ ಕ್ಷೇತ್ರ ಫೈನಲ್ ಆಯ್ತಾ..?

ಕೋಲಾರ: ಹಲವು ದಿನಗಳಿಂದ ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಸಿ ಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಬಹುತೇಕ ಫೈನಲ್ ಆದಂತಿದೆ. ಅವರ ಅಭಿಮಾನಿಗಳ ಗೊಂದಲಕ್ಕೂ ಸಹ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿದ್ದಾರೆ, ಇದರಲ್ಲಿ ಯಾವುದೇ ಗೊಂದಲ ಬೇಡಾ ಎಂದು ಎಂದು ಕಾಂಗ್ರೆಸ್ ಮುಖಂಡ ಚಂಜಿಮಲೆ ರಮೇಶ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವ್ರು ಜಿಲ್ಲೆಗೆ ಕೆ,ಸಿ ವ್ಯಾಲಿ ಯೋಜನೆ ಕೊಡುಗೆ ನೀಡಿದ್ದಾರೆ, ಆದರೆ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ 2 ಬಾರಿ ಶಾಸಕರಾದರು, ಕೋಲಾರಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದರು.

ಕೋಲಾರ ನಗರದ ಜೂನಿಯರ್ ಕಾಲೇಜ್ ಬಳಿ ಜನವರಿ 9 ರಂದು ಬೃಹತ್ ಕಾರ್ಯಕರ್ತರ ಸಭೆ ಆಯೋಜನೆ ಮಾಡಿದ್ದು, ಸಭೆಗೆ 5 ಸಾವಿರ ಕಾಂಗ್ರೆಸ್ ಕಾರ್ಯಕರ್ತರನ್ನ ಸೇರಿಸಲು ಪೂರ್ವಭಾವಿ ಸಭೆಯನ್ನ ಮಾಜಿ ಸಚಿವ ಕೃಷ್ಣಬೈರೇಗೌಡ, ಕೋಲಾರ ಶಾಸಕ ಶ್ರೀನಿವಾಸಗೌಡ, ಪರಿಷತ್ ಶಾಸಕರಾದ ಅನಿಲ್ ಕುಮಾರ್, ನಸೀರ್ ಅಹಮದ್, ವಿ.ಆರ್ ಸುದರ್ಶನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು, ಚಂಜಿಮಲೆ ಗ್ರಾಮದ ರಮೇಶ್ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಭಾಗಿಯಾಗಿದ್ದರು, ಸಭೆಯಲ್ಲಿ ಮಾತನಾಡಿದ ಎಲ್ಲಾ ನಾಯಕರು, ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೊದಾಗಿ ಸಿದ್ದರಾಮಯ್ಯ ಘೋಷಣೆ ಮಾಡ್ತಾರೆ,ಎಲ್ಲರೂ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಕೊಟ್ಟರು.

ಕಾರ್ಯಕ್ರಮದ ನಂತರ ಮಾತನಾಡಿದ ವೇಮಗಲ್ ಹೋಬಳಿಯ ಕಾಂಗ್ರೆಸ್ ನಾಯಕ ಚಂಜಿಮಲೆ ರಮೇಶ್, ಕೆ,ಸಿ ವ್ಯಾಲಿ ಯೋಜನೆಯಿಂದ ಕೋಲಾರ ತಾಲೂಕು, ಅರೆ ಮಲೆನಾಡಿನಂತಾಗಿದೆ, ಅಂತಹ ಮಹಾನ್ ನಾಯಕ ಶಾಸಕರಾದರೆ, ಕೋಲಾರ ತಾಲೂಕು ನೂರಕ್ಕೆ ನೂರರಷ್ಟು ಅಭಿವೃದ್ದಿ ಕಾಣುತ್ತದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ರಾಜಕೀಯ ಚಟುವಟಿಕೆಯನ್ನ ನಡೆಸುತ್ತಿರುವುದು ಇಂತಹ ಹೇಳಿಕೆಗಳಿಗೆ ಪುಷ್ಠಿ ನೀಡುತ್ತಿದೆ.ಆದರೆ ಸಿದ್ದರಾಮಯ್ಯ ಅಭಿಮಾನಿಗಳಿಗೂ ಸಹ ಕುತೂಹಲ ಕಾಡುತ್ತಿದ್ದು ಅಂತಿಮವಾಗಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ ಬಳಿಕವಷ್ಟೇ ಗೊಂದಲಗಳಿಗೆ ತೆರೆ ಬೀಳಲಿದೆ.

Share Post