Politics

ನಾನು ಕೆಪಿಸಿಸಿ ಅಧ್ಯಕ್ಷನಾಗಲು ರೆಡಿ ಎಂದ ಸಚಿವ ಕೆ.ಎನ್‌.ರಾಜಣ್ಣ

ಬೆಂಗಳೂರು; ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ.. ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶ ಸಿಕ್ಕರೆ ಮಂತ್ರಿ ಸ್ಥಾನವನ್ನು ತೊರೆಯುತ್ತೇನೆ ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು, ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗುವುದಾದರೆ ನಾನು ಕೂಡಾ ಆಕಾಂಕ್ಷಿ.. ಅಧ್ಯಕ್ಷ ಸ್ಥಾನ ಸಿಕ್ಕರೆ ನಾನು ಚುನಾವಣೆಗೂ ಸ್ಪರ್ಧೆ ಮಾಡೋದಿಲ್ಲ. ಪಕ್ಷಕ್ಕಾಗಿ ತನು, ಮನವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ..
ನಮ್ಮ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ.. ಕೆ.ಸಿ.ವೇಣುಗೋಪಾಲ್‌ ಅವರು ಸಿದ್ದರಾಮಯ್ಯ ಸಿಎಂ ಆಗಿ, ಡಿ.ಕೆ.ಶಿವಕುಮಾರ್‌ ಡಿಸಿಎಂ ಆಗಿ ಐದು ವರ್ಷ ಪೂರೈಸುತ್ತಾರೆ ಎಂದು ಹೇಳಿದ್ದರು.. ಆದ್ರೆ ಚುನಾವಣೆ ಫಲಿತಾಂಶ ಬಂದ ಮೇಲೆ ಧ್ರುವೀಕರಣ ಆಗಬಹುದು ಎಂದೂ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ..

ವಕೀಲ ದೇವರಾಜೇಗೌಡ, ಡಿಕೆ ಶಿವಕುಮಾರ್​ ಆಡಿಯೋ ಬಗ್ಗೆ ಮಾತನಾಡಿದ ಸಚಿವರು, ಕರೆ ಮಾಡಿದರೆ ಮಾತನಾಡದೇ ಇರೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.. ನಮ್ಮನ್ನು ಸಿಲುಕಿಸಲು ಪ್ರಯತ್ನ ಮಾಡುತ್ತಾರೆ. ಹೆಣ್ಣುಮಕ್ಕಳು ಕರೆ ​ಮಾಡಿದರೆ ನಾನೇ ಬ್ಲಾಕ್ ಮಾಡುತ್ತೇನೆ ಎಂದೂ ಹೇಳಿದ್ದಾರೆ.

 

Share Post