CrimeNational

ಇಂತಹ ಕಿಲಾಡಿ ಮಹಿಳೆಯನ್ನು ನೀವು ನೋಡೇ ಇರೋದಿಲ್ಲ..!; ಹೀಗೂ ಕಳ್ಳತನ ಮಾಡ್ತಾರಾ..?

ಆಂಧ್ರಪ್ರದೇಶ; ತುಂಬಾ ಚಾಲಾಕಿ, ಕಿಲಾಡಿ ಮಹಿಳೆಯರನ್ನು ನೀವು ನೋಡೇ ಇರ್ತೀರಿ.. ಆದ್ರೆ ನಾವು ಇಲ್ಲಿ ಹೇಳುವಂತಹ ಮಹಿಳೆಯ ಕಿಲಾಡಿತನ ಯಾರಿಗೂ ಇರೋದಿಲ್ಲ… ಯಾಕಂದ್ರೆ, ಈಕೆ ಹಾಕಿದಂತಹ ಬೆನ್ನಿಗೆ ಚೂರಿ ಹಲವಾರು ಮಹಿಳೆಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.. ಈಕೆ ಮಾಡಿದ ಖತರ್ನಾಕ್‌ ಕಳ್ಳತನ ಒಂದು ಸಿನಿಮಾದ ಕಥೆಯಾದರೂ ಅಚ್ಚರಿ ಇಲ್ಲ.. ಅಷ್ಟು ಕುತೂಹಲ ಇದೆ ಈ ಸ್ಟೋರಿಯಲ್ಲಿ..

ಕಡಪ ಜಿಲ್ಲೆ ಪ್ರೊದ್ದುಟೂರಿನಲ್ಲಿ ಜಹಾರಾ ತಾಜ್‌ ಎಂಬ ಮಹಿಳೆ ತನ್ನ ಸ್ನೇಹಿತೆಯರಿಗೇ ದೊಡ್ಡ ಪಂಗನಾಮ ಹಾಕಿದ್ದಾಳೆ.. ಈಕೆ ಪ್ರೊದ್ದುಟೂರಿನ ಮೌಲಾನಾ ಆಜಾದ್‌ ಸ್ಟ್ರೀಟ್‌ ನಂಬರ್‌ 2ರಲ್ಲಿ ವಾಸ ಮಾಡುತ್ತಾಳೆ.. ಈಕೆ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ.. ಹಲವು ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಂಡಿದ್ದ ಈಕೆ, ಸಾಲ ಕೊಡಿಸುತ್ತೇನೆ ಎಂದು ಮಹಿಳೆಯರನ್ನು ತನ್ನ ಮನೆಗೆ ಕರೆಸುತ್ತಿದ್ದಳು.. ನಂತರ ಮನೆಗೆ ಬಂದ ಮಹಿಳೆಯನ್ನು ಯಾಮಾರಿಸಿ ಆಕೆಯ ಬ್ಯಾಗ್‌ನಲ್ಲಿದ್ದ ಆಕೆಯ ಮನೆಯ ಕೀ ಕದಿಯುತ್ತಿದ್ದಳು.. ಅನಂತರ ಸಾಲದ ಬಗ್ಗೆ ಬ್ಯಾಂಕಿಗೆ ಹೋಗಿ ಮಾತನಾಡಿ ಬರುತ್ತೇನೆ.. ಅಲ್ಲಿಯತನಕ ಇಲ್ಲಿಯೇ ಇರು ಎಂದು ತನ್ನ ಮನೆಯಲ್ಲೇ ಮಹಿಳೆಯನ್ನು ಇರಿಸಿ ಹೋಗುತ್ತಿದ್ದಳು.. ಆ ಮಹಿಳೆಯ ಮನೆಗೆ ಹೋಗಿ ಬೀರುವಿನಲ್ಲಿರುವ ಚಿನ್ನಾಭರಣಗಳನ್ನು ಕದ್ದು, ನಂತರ ಮನೆಯನ್ನು ಲಾಕ್‌ ಮಾಡಿಕೊಂಡು ಬರುತ್ತಿದ್ದಳು.. ನಂತರ ಆ ಮಹಿಳೆಯ ಬ್ಯಾಗ್‌ಗೆ ಗೊತ್ತಿಲ್ಲದಂತೆ ಕೀ ಹಾಕುತ್ತಿದ್ದಳು.. ಹೀಗೆ ಹಲವಾರು ಮಹಿಳೆಯರ ಮನೆಗಳಲ್ಲಿ ಚಿನ್ನಾಭರಣ ಕದ್ದಿದ್ದ ಖತರ್ನಾಕ್‌ ಲೇಡಿ ಈಗ ಅಂದರ್‌ ಆಗಿದ್ದಾಳೆ..

ಸ್ವಸಹಾಯ ಸಂಘದ ಮಹಿಳೆಯರಲ್ಲಿ ಯಾರ ಮನೆಯಲ್ಲಿ ಚಿನ್ನಾಭರಣ ಚೆನ್ನಾಗಿದೆ ಎಂದು ತಿಳಿದುಕೊಳ್ಳುತ್ತಿದ್ದಳು.. ಅವರಿಗೆ ಗಾಳ ಹಾಕುತ್ತಿದ್ದರು.. ಮಾಯದ ಮಾತುಗಳನ್ನು ಹೇಳಿ ಮನೆಗೆ ಕರೆಸಿಕೊಳ್ಳುತ್ತಿದ್ದಳು.. ಕೀ ಕದ್ದು ಅವರ ಮನೆಗೆ ಹೋಗು ಕದಿಯುತ್ತಿದ್ದಳು.

ಮೌಲಾನಾ ಆಜಾದ್ ಸ್ಟ್ರೀಟ್‌ನಲ್ಲಿರುವ ಎರಡು ಮನೆಗಳು ಮತ್ತು ಕೆಎಚ್‌ಎಂ ಸ್ಟ್ರೀಟ್‌ನಲ್ಲಿರುವ ಇನ್ನೊಂದು ಮನೆಯಲ್ಲಿ ಜಹಾರಾ ಕಳ್ಳತನ ಮಾಡಿದ್ದಾಳೆ. ಒಟ್ಟು 35 ತೊಲ ಚಿನ್ನಾಭರಣ ದೋಚಲಾಗಿದೆ. ಕೂಡಲೇ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ತನಿಖೆಯಲ್ಲಿ ಜಹಾರಾಳೇ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.. ಕದ್ದ ಚಿನ್ನಾಭರಣಗಳನ್ನು ಕರಗಿಸಿ ಚಿನ್ನಾಭರಣ ಮಾಡಿಸಲು ಆಕೆ ನೆಲ್ಲೂರಿಗೆ ಹೋಗಿದ್ದಳು. ವಾಪಸ್‌ ಬರುವಾಗ ಆಕೆಯನ್ನು ಪೊಲೀಸರು  ಪ್ರೊದ್ದುಟೂರಿನ ಗಂಗಮ್ಮ ದೇವಸ್ಥಾನದ ಬೀದಿಯಲ್ಲಿ ಬಂಧಿಸಿದ್ದಾರೆ.

ಪೊಲೀಸರು ಆಕೆಯಿಂದ 31 ತೊಲ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಚಿನ್ನದ ಮೌಲ್ಯ ರೂ.22.32 ಲಕ್ಷ ಎಂದು ಅಂದಾಜಿಸಲಾಗಿದೆ.

Share Post