NationalPolitics

ಭವಿಷ್ಯ ಬರೆಯುತ್ತಿದ್ದಾನೆ ತೆಲಂಗಾಣ ಮತದಾರ; ಬೆಳಗ್ಗೆಯಿಂದ ಬಿರುಸಿನ ವೋಟಿಂಗ್‌

ಹೈದರಾಬಾದ್‌; ಕಳೆದ ಒಂದು ತಿಂಗಳಿಂದ ತೆಲಂಗಾಣದಲ್ಲಿ ಚುನಾವಣಾ ಕಣ ಭಾರಿ ರಂಗೇರಿತ್ತು. ಬಿರುಸಿನ ಭಾಷಣಗಳು, ವಾಗ್ಬಾಣಗಳು, ಆಶ್ವಾಸನೆಗಳು ಜೋರಾಗಿದ್ದವು. ಇಂದು ಮತದಾರ ಭವಿಷ್ಯ ಬರೆಯುತ್ತಿದ್ದಾನೆ. ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ ಏಳು ಗಂಟೆಯಿಂದಲೇ ಮತದಾನ ಬಿರುಸಾಗಿ ನಡೆಯುತ್ತಿದೆ.

ಗಣ್ಯರು, ಸಿನಿಮಾ ಮಂದಿ ಕೂಡಾ ಬೆಳಗ್ಗೆಯೇ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.  ಖ್ಯಾತ ನಟ ಅಲ್ಲು ಅರ್ಜುನ್‌, ಜೂನಿಯರ್‌ ಎನ್‌ಟಿಆರ್‌ ಹಾಗೂ ಚಿರಂಜೀವಿ ಹೈದರಾಬಾದ್‌ನಲ್ಲಿ ಮತ ಚಲಾವಣೆ ಮಾಡಿದರು. ಈ ವೇಳೆ ಅವರ ಕುಟುಂಬದ ಸದಸ್ಯರು ಕೂಡಾ ಮತದಾನ ಮಾಡಿದರು. ಎಲ್ಲಾ ಸ್ಟಾರ್‌ಗಳೂ ಕೂಡಾ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಗಮನ ಸೆಳೆಯಿತು.

ಅಲ್ಲು ಅರ್ಜುನ್‌ ತಾವೊಬ್ಬರೇ ಮತಗಟ್ಟೆಗೆ ಬಂದು ವೋಟ್‌ ಮಾಡಿದರು. ಜೂನಿಯರ್‌ ಎನ್‌ಟಿಆರ್‌ ಅವರು ಪತ್ನಿ ಲಕ್ಷ್ಮಿ ಪ್ರಣತಿ, ತಾಯಿ ಶಾಲಿನಿ ನಂದಮೂರಿ ಜೊತೆ ಆಗಮಿಸಿದ್ದರು.  ಮೆಗಾಸ್ಟಾರ್‌ ಚಿರಂಜೀವಿ ಸಹ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು.

 

Share Post