BengaluruCrime

Rameshwaram Cafe Case; ಆರೋಪಿ ಧರಿಸಿದ್ದ ಟೋಪಿ ಪತ್ತೆ; ಶಂಕಿತನ ಬಗ್ಗೆ ಮಹತ್ವದ ಸುಳಿವು!

ಬೆಂಗಳೂರು; ಮಾರ್ಚ್‌ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಬಾಂಬ್‌ ಇದ್ದ ಬ್ಯಾಗ್‌ ಅನ್ನು ರಾಮೇಶ್ವರಂ ಕೆಫೆಯಲ್ಲಿ ಇಟ್ಟುಹೋಗಿದ್ದ ಶಂಕಿತ ಉಗ್ರ, ಬಿಎಂಟಿಸಿ ವೋಲ್ವೋ ಬಸ್‌ ಹತ್ತಿ ಹೂಡಿ ಬಳಿ ಬಸ್‌ ಇಳಿದಿದ್ದಾನೆ. ಅಲ್ಲೇ ಆತ ಬಟ್ಟೆಗಳನ್ನು ಬದಲಿಸಿಕೊಂಡು ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಟೋಪಿ ಬಿಟ್ಟುಹೋಗಿರುವ ಶಂಕಿತ ಉಗ್ರ;

ಟೋಪಿ ಬಿಟ್ಟುಹೋಗಿರುವ ಶಂಕಿತ ಉಗ್ರ;  ಹೂಡಿ ಬಳಿ ಬಟ್ಟೆ ಬದಲಿಸಿಕೊಂಡಿರುವ ಶಂಕಿತ ಉಗ್ರ ಆತುರದಲ್ಲಿ ಟೋಪಿಯನ್ನು ಅಲ್ಲೇ ಬಿಟ್ಟುಹೋಗಿದ್ದಾನೆ. ಈ ಟೋಪಿ ತನಿಖೆಯ ವೇಳೆ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದೆ. ಎನ್‌ಐಎ ಅಧಿಕಾರಿಳು ಪತ್ತೆಯಾದ ಟೋಪಿ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ತುಮಕೂರು, ಬಳ್ಳಾರಿಯಲ್ಲಿ ಹುಡುಕಾಟ;

ತುಮಕೂರು, ಬಳ್ಳಾರಿಯಲ್ಲಿ ಹುಡುಕಾಟ; ಶಂಕಿತ ಉಗ್ರ ತಮಿಳುನಾಡಿಗೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ, ಆತ ತುಮಕೂರು ಮೂಲಕ ಬಳ್ಳಾರಿಗೆ ಹೋಗಿದ್ದಾನೆ. ಅಲ್ಲಿಂದ ಮತ್ತೊಂದು ಬಸ್‌ನಲ್ಲಿ ಪರಾರಿಯಾಗಿದ್ದಾನೆ. ಎನ್‌ಐಎ ಅಧಿಕಾರಿಗಳು ಬೆಂಗಳೂರು ನಗರದ ಹಲವೆಡೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಶಂಕಿತ ಉಗ್ರ ಘಟನೆ ನಡೆದ ದಿನ ಬಸ್‌ ಹತ್ತಿ ತುಮಕೂರಿಗೆ ಹೋಗಿರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಎರಡು ಕಾರುಗಳಲ್ಲಿ ತುಮಕೂರಿಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆದ್ರೆ ಆತ ಅಲ್ಲಿಂದ ಬಳ್ಳಾರಿಗೆ ಹೋಗುವ ಬಸ್‌ ಹತ್ತಿ ಹೋಗಿದ್ದಾನೆ. ಬಳ್ಳಾರಿಗೂ ಎನ್‌ಐಎ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆತ ಬಳ್ಳಾರಿಯಿಂದ ಬೀದರ್‌ ಅಥವಾ ಭಟ್ಕಳಕ್ಕೆ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಬಿಎಂಟಿಸಿ ಬಸ್‌ನಲ್ಲಿ ಶಂಕಿತ ಉಗ್ರ;

ಬಿಎಂಟಿಸಿ ಬಸ್‌ನಲ್ಲಿ ಶಂಕಿತ ಉಗ್ರ; ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಶಂಕಿತ ಉಗ್ರ ಓಡಾಡಿದ್ದಾನೆ. ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಆತ ದೃಶ್ಯಗಳು ಸೆರೆಯಾಗಿವೆ. ಆ ವಿಡಿಯೋವನ್ನು ಕೂಡಾ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ. ಶಂಕಿತ ಉಗ್ರ ಹಿಂದಿ ಮಾತನಾಡುತ್ತಿದ್ದ ಎಂದು ತಿಳಿದುಬಂದಿದ್ದು, ಬೇರೆ ರಾಜ್ಯದಿಂದ ಇಲ್ಲಿಗೆ ಬಂದಿರಬಹುದೆಂದು ಶಂಕಿಸಲಾಗಿದೆ.

ಶಂಕಿತ ಉಗ್ರನ ರೇಖಾಚಿತ್ರ ಬಿಡುಗಡೆ;

ಶಂಕಿತ ಉಗ್ರನ ರೇಖಾಚಿತ್ರ ಬಿಡುಗಡೆ; ಬುಧವಾರ ಶಂಕಿತ ಉಗ್ರನ ಫೋಟೋ ರೀಲೀಸ್‌ ಮಾಡಲಾಗಿತ್ತು. ಅದರಲ್ಲಿ ಆತನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಇದೀಗ ಗುರುವಾರ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರನ ರೇಖಾಚಿತ್ರವನ್ನು  ಬಿಡುಗಡೆ ಮಾಡಿದ್ದಾರೆ. ಹರ್ಷ ಎಂಬ ಚಿತ್ರ ಕಲಾವಿದ ಈ ರೇಖಾಚಿತ್ರ ಬರೆದಿದ್ದು, ಇದರಿಂದ ಶಂಕಿತ ಉಗ್ರನನ್ನು ಹುಡುಕಲು ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ಶಂಕಿತನ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಕೂಡಾ ಬುಧವಾರವೇ ಘೋಷಣೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ಕರೆ ಮಾಡಿ ಮಾಹಿತಿ ಕೊಡಲು ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

Share Post