Politics

ರಾಜ್ಯದಲ್ಲಿ ಮೋದಿ, ಯೋಗಿ, ಅಮಿತ್‌ ಶಾ ಅಬ್ಬರ; ಕರ್ನಾಟಕ ಟೂರ್‌ ವೇಳಾಪಟ್ಟಿ ಇಲ್ಲಿದೆ!

ಬೆಂಗಳೂರು; ಈಗಾಗಲೇ ಪ್ರಧಾನಿ ನರೇಂದ್ರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿ ಹೋಗಿದ್ದಾರೆ.. ಈಗ ಮತ್ತೊಂದು ರೌಂಡ್‌ ಪ್ರಚಾರಕ್ಕೆ ಬರುತ್ತಿದ್ದಾರೆ.. ಇವರಿಬ್ಬರ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡಾ ರಾಜ್ಯದಲ್ಲಿ ಪ್ರಚಾರಕ್ಕೆ ಬರುತ್ತಿದ್ದಾರೆ.. ಹಾಗಾದ್ರೆ ಈ ಮೂವರು ನಾಯಕರು ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೆ ನೋಡೋಣ..

ಏಪ್ರಿಲ್‌ 20 – ಸಂಜೆ 4 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಮೋದಿ ಸಾರ್ವಜನಿಕ ಸಮಾವೇಶ
ಸಂಜೆ 6 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ
ಏಪ್ರಿಲ್‌ 23, 24 – ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರವಾಸ
ಏಪ್ರಿಲ್‌ 23 – ಬೆಂಗಳೂರಿನ ಯಶವಂತಪುರ, ಯಲಹಂಕ, ಮಹದೇವಪುರದಲ್ಲಿ ರೋಡ್‌ ಶೋ, ಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕ
ಏಪ್ರಿಲ್‌ 24 – ಚಿಕ್ಕಮಗಳೂರಿನಲ್ಲಿ ಅಮಿತ್‌ ಶಾ ಸಾರ್ವಜನಿಕ ಸಭೆ, ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ, ಹುಬ್ಬಳ್ಳಿಯಲ್ಲಿ ರೋಡ್‌ ಶೋ
ಏಪ್ರಿಲ್ 21 – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು 24 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರ
ಏಪ್ರಿಲ್ 24 – ಉತ್ತರ ಪ್ರದೇಶ ಸಿಎಂ ಯೋಗಿ ಪ್ರಚಾರ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಿಎಂ ಯೋಗಿ ರೋಡ್​ಶೋ. ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ, ಉಡುಪಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿ

Share Post