BengaluruPolitics

ಮನೆಯಿಂದ ಮತದಾನಕ್ಕೆ 80 ಸಾವಿರ ಮಂದಿಯಿಂದ ನೋಂದಣಿ

ಬೆಂಗಳೂರು; ಎಂಬತ್ತು ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡೋದಕ್ಕೆ ಈ ಬಾರಿ ಅವಕಾಶ ನೀಡಲಾಗಿದ್ದು, ಮನೆಯಿಂದಲೇ ಮತದಾನ ಮಾಡಲು ರಾಜ್ಯಾದ್ಯಂತ ಸುಮಾರು 80 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್‌ ಕುಮಾರ್‌ ಮೀನಾ ಅವರು ಈ ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಮತದಾರರು ಸೇರಿದಂತೆ ಚುನಾವನೆಗೆ ಸಂಬಂಧಿಸಿದ ಹಲವು ಮಾಹಿತಿ ನೀಡಿದ್ದಾರೆ.

– ರಾಜ್ಯದಲ್ಲಿ ಒಟ್ಟು ಮತದಾರರು; 5 ಕೋಟಿ 30 ಲಕ್ಷದ 85 ಸಾವಿರದ 566 ಮಂದಿ
– ಒಟ್ಟು ಪುರುಷ ಮತದಾರರು; 2 ಕೋಟಿ 66 ಲಕ್ಷದ 82 ಸಾವಿರದ 156 ಮಂದಿ
– ಒಟ್ಟು ಮಹಿಳಾ ಮತದಾರರು; 2 ಕೋಟಿ 63 ಲಕ್ಷದ 98 ಸಾವಿರದ 483 ಮಂದಿ
– ಹೊಸದಾಗಿ ಮಾತದಾರರ ಪಟ್ಟಿಗೆ ಸೇರಿದವರು; 16 ಲಕ್ಷದ 4 ಸಾವಿರದ 285 ಮಂದಿ
– 58 ಸಾವಿರದ 545 ಪೋಲಿಂಗ್‌ ಸ್ಟೇಷನ್‌ಗಳ ಸ್ಥಾಪನೆ
– 1 ಲಕ್ಷ 15 ಸಾವಿರದ 709 ಇವಿಎಂ, 8 ಲಕ್ಷ 9 ಸಾವಿರದ 379 ಮಂದಿ
– 47 ಸಾವಿರದ 488 ಯೋಧರಿಗೆ ಅಂಚೆ ಮತಪತ್ರಗಳ ರವಾನೆ
– 80 ಸಾವಿರ 250 ಮಂದಿ 80 ವರ್ಷ ದಾಟಿದವರು ಮನೆಯಿಂದ ಮತದಾನಕ್ಕೆ ನೋಂದಾಯಿಸಿದ್ದಾರೆ

Share Post