Politics

COUNTING LIVE UPDATES; ಲೋಕಸಭಾ ಚುನಾವಣೆ ಮತ ಎಣಿಕೆ; ಯಾರಿಕೆ ಒಲಿಯಲಿದೆ ಅಧಿಕಾರ..?

ನವದೆಹಲಿ; ಲೋಕಸಭಾ ಚುನಾವಣೆಯ 543 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಶುರುವಾಗುತ್ತಿದೆ.. ಯಾರಿಗೆ ಎಷ್ಟು ಸ್ಥಾನಗಳು ಬರಲಿವೆ ಎಂಬ ಕುತೂಹಲ ಶುರುವಾಗಿದೆ.. ಚುನಾವಣೋತ್ತರ ಸಮೀಕ್ಷೆಯಂತೆಯೇ ಫಲಿತಾಂಶ ಬರಲಿದೆಯಾ..? ಇಲ್ಲವೇ ಕಾಂಗ್ರೆಸ್‌ ನಾಯಕರು ಹೇಳಿದಂತೆ ಸಮೀಕ್ಷೆಗಳು ಉಲ್ಟಾ ಆಗಲಿವೆ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ.. ದೇಶಾದ್ಯಂತ ಇಂದು ಮತ ಎಣಿಕೆ ಕಾರ್ಯ ಶುರುವಾಗುತ್ತಿದೆ.. ಮಧ್ಯಾಹ್ನದ ವೇಳೆಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.. ಸಂಜೆಯೊಳಗೆ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ..

ಏಳು ಹಂತಗಳಲ್ಲಿ ಮತದಾನ ನಡೆದಿತ್ತು.. ಎನ್‌ಡಿಎ ಈ ಬಾರಿ ನಾವು 400 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿತ್ತು.. ಈ ಮೂಲಕ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವ ವಿಶ್ವಾಸದಲ್ಲಿದ್ದಾರೆ.. ಇನ್ನು ಇಂಡಿಯಾ ಒಕ್ಕೂಟ ಗೆದ್ದರೆ ಮಹಿಳೆಯರ ಖಾತೆಗೆ 8500 ರೂಪಾಇ ಹಾಕುವುದಾಗಿ ರಾಹುಲ್‌ ಗಾಂಧಿ ಹೇಳಿದ್ದರು.. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಮೋದಿಯೇ ಗ್ಯಾರೆಂಟಿ ಎಂಬ ಘೋಷಣೆ ಮಾಡಿದ್ದರು..

 

Share Post