CrimePolitics

Breaking; ಪ್ರಾಸಿಕ್ಯೂಷನ್‌ ಕೇಸ್‌ ವಿಚಾರಣೆ ಮುಕ್ತಾಯ; ಆದೇಶ ಒಂದೇ ಬಾಕಿ!

ಬೆಂಗಳೂರು; ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ಇಂದಿಗೆ ಮುಕ್ತಾಯವಾಗಿದೆ.. ಇಂದು ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್‌ನಲ್ಲಿ ಅಂತಿಮ ಹಂತದ ವಾದ-ಪ್ರತಿವಾದ ಶುರುವಾಯಿತು.. ಸಂಜೆ 6.30ರ ಸುಮಾರಿಗೆ ವಿಚಾರಣೆ ಮುಗಿದಿದೆ. ಇನ್ನು ಆದೇಶ ಒಂದೇ ಬಾಕಿ ಇರುವುದು.. ನ್ಯಾಯಮೂರ್ತಿಗಳು ಆದೇಶವನ್ನು ಕಾಯ್ದಿರಿಸಿದ್ದಾರೆ.. ಹೀಗಾಗಿ ಅದೇಶ ಏನು ಬರುತ್ತೆ ಅನ್ನೋದರ ಬಗ್ಗೆ ಕುತೂಹಲ ಇದೆ..
ಎರಡೂ ಕಡೆಯವರಿಗೆ ಟೆನ್ಷನ್‌ ಶುರುವಾಗಿದೆ.. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ ಅನುಮತಿ ರದ್ದು ಮಾಡಿದರೆ ಸಿಎಂ ಸಿದ್ದರಾಮಯ್ಯ ನಿರಾಳರಾಗಲಿದ್ದಾರೆ.. ಸಿಎಂ ಮನವಿ ತಿರಸ್ಕಾರವಾಗಿ ರಾಜ್ಯಪಾಲರ ಆದೇಶ ಎತ್ತಿಹಿಡಿದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಲಿದೆ.. ಹೀಗಾಗಿ ಆದೇಶ ಏನು ಬರುತ್ತೆ ಅನ್ನೋದರ ಬಗ್ಗೆ ಎಲ್ಲರಿಗೂ ಟೆನ್ಷನ್‌ ಶುರುವಾಗಿದೆ..
ಇಂದು ಸಿಎಂ ಪರವಾಗಿ ಅಭಿಷೇಕ್‌ ಮನುಸಿಂಘ್ವಿ ಹಾಗೂ ರವಿವರ್ಮಕುಮಾರ್‌ ವಾದ ಮಂಡನೆ ಮಾಡಿದರು..

Share Post