Politics

Counting Live Updates; ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಲಿದೆ..?

ಬೆಂಗಳೂರು; ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕೂಡಾ ಇಂದು ಪ್ರಕಟವಾಗಲಿದೆ.. ಈಗಾಗಲೇ ಕೌಂಟಿಂಗ್‌ ಶುರುವಾಗುತ್ತಿದೆ.. ಯಾರ ಪಕ್ಷಕ್ಕೆ ಎಷ್ಟು ಸೀಟುಗಳು ಬರಲಿವೆ ಎಂಬ ಲೆಕ್ಕಾಚಾರ ಜೋರಾಗಿದೆ.. ಇನ್ನು ಕೆಲವು ಕ್ಷೇತ್ರಗಳಲ್ಲಿ ಬೆಟ್ಟಿಂಗ್‌ ಕೂಡಾ ಜೋರಾಗಿ ನಡೆದಿದೆ..

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ.. ಬಿಜೆಪಿ 25 ಸ್ಥಾನಗಳಲ್ಲಿ ಜೆಡಿಎಸ್‌ 3 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.. ಕಾಂಗ್ರೆಸ್‌ ಏಕಾಂಗಿಯಾಗಿ 28 ಸ್ಥಾನಗಳಲ್ಲೂ ಸ್ಪರ್ಧಿಸಿದೆ.. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಅದಕ್ಕಿದೆ.. ಆದ್ರೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬೇರೆಯದೇ ಫಲಿತಾಂಶ ಬಂದಿದೆ.. ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಕೂಡಾ ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನ ಬರುತ್ತೆ ಅಂತ ಎಲ್ಲ ಸಮೀಕ್ಷೆಗಳೂ ಹೇಳಿವೆ.. ಆದ್ರೆ ಕಾಂಗ್ರೆಸ್‌ ನಾಯಕರು ಮಾತ್ರ ಸಮೀಕ್ಷೆಗಳು ಉಲ್ಟಾ ಹೊಡೆಯುತ್ತವೆ ಎಂದು ಹೇಳುತ್ತಿದ್ದಾರೆ..

ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯಿಂದ ಡಾ.ಸಿ.ಎನ್‌.ಮಂಜುನಾಥ್‌ ಹಾಗೂ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್‌ ಕಣದಲ್ಲಿದ್ದಾರೆ.. ಈ ಕ್ಷೇತ್ರ ಕರ್ನಾಟಕದಲ್ಲೇ ಹೈವೋಲ್ಟೇಜ್‌ ಕ್ಷೇತ್ರ.. ಎಲ್ಲರೂ ಕೂಡಾ ಈ ಕ್ಷೇತ್ರದ ಮೇಲೆ ಹೆಚ್ಚು ಗಮನ ಕೊಟ್ಟಿದ್ದಾರೆ.. ಇನ್ನು ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿತನಾಗಿರುವ ಪ್ರಜ್ವಲ್‌ ಹಾಸನದಲ್ಲಿ ಸೋಲುತ್ತಾರಾ, ಗೆಲ್ಲುತ್ತಾರಾ..? ಎಂಬ ಕುತೂಹಲ ಇದ್ದೇ ಇದೆ.. ಇದರ ಜೊತೆಗೆ ಮಹಿಳೆಯರಿಗೆ ಈ ಬಾರಿ ಹೆಚ್ಚಿನ ಪ್ರಾತಿನಿದ್ಯ ಕೊಡಲಾಗಿದೆ.. ಹೀಗಾಗಿ ಯಾವ ನಾಯಕಿ ಲೋಕಸಭೆ ಪ್ರವೇಶ ಮಾಡುತ್ತಾರೆ ಎಂಬ ಕುತೂಹಲ ಅಂತೂ ಇದ್ದೇ ಇದೆ..

Share Post