Politics

ರಾಹುಲ್‌ ಗಾಂಧಿಯೇ ವಿಪಕ್ಷ ನಾಯಕರಾಗಲಿ; CWC ಸಭೆಯಲ್ಲಿ ತೀರ್ಮಾನ

ನವದೆಹಲಿ; ಇಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್‌ ಗಾಂಧಿ ಅವರನ್ನೇ ವಿಪಕ್ಷ ನಾಯಕನನ್ನಾಗಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಎಲ್ಲಾ ನಾಯಕರೂ ರಾಹುಲ್‌ ಗಾಂಧಿಯವರೇ ವಿಪಕ್ಷ ನಾಯಕನಾಗಬೇಕು ಎಂದು ಒತ್ತಾಯ ಮಾಡಿದರು..

ರಾಹುಲ್‌ ಗಾಂಧಿಯವರ ಶ್ರಮದಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.. ಭಾರತ್‌ ಜೋಡೋ ಯಾತ್ರೆ ಮಾಡಿದ ಸ್ಥಳಗಳಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ.. ಹೀಗಾಗಿ ಕಾಂಗ್ರೆಸ್‌ ಗೆಲುವಿನ ಕ್ರೆಡಿಟ್‌ ರಾಹುಲ್‌ ಗಾಂಧಿಯವರಿಗೆ ಸಿಗಬೇಕು.. ಹೀಗಾಗಿ ರಾಹುಲ್‌ ಗಾಂಧಿಯವರೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾಗಬೇಕು ಎಂದು ಸಭೆಯಲ್ಲಿದ್ದವರು ಒತ್ತಾಯ ಮಾಡಿದರು..  ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಾವು ಬಲಿಷ್ಠ ವಿಪಕ್ಷವಾಗಲು ನಾವು ರೆಡಿ ಇದ್ದೇವೆ. ರಾಹುಲ್ ಗಾಂಧಿಯೇ ವಿಪಕ್ಷ ನಾಯಕನಾಗಲು ಸೂಕ್ತ ಎಂದು CWC ನಿರ್ಧರಿಸಿದೆ.

Share Post