NationalPolitics

ಬಿಜೆಪಿ ಪಾದಯಾತ್ರೆಗೆ ಬೆಂಬಲ ಕೊಡೋದಿಲ್ಲ ಎಂದು ಕುಮಾರಸ್ವಾಮಿ

ನವದೆಹಲಿ; ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ಕರೆ ನೀಡಿದೆ.. ಆದ್ರೆ ಇದಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾಗುತ್ತಿವೆ.. ಬಿಜೆಪಿಯಲ್ಲಿನ ಕೆಲವರು ನಾಯಕರು ಈ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.. ಈ ನಡುವೆ ಜೆಡಿಎಸ್‌ ಕೂಡಾ ಪಾದಯಾತ್ರೆಗೆ ಬೆಂಬಲ ನೀಡಲು ನಿರ್ಧಾರ ಮಾಡಿದೆ.. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದ್ದಾರೆ.. ಹೋರಾಟದ ವಿಚಾರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಬ್ಲ್ಯೂಫಿಲಂ ನೋಡಿ ಪಕ್ಕದಲ್ಲಿ ಮಲಗಿದ್ದ ತಂಗಿಯ ಮೇಲೇ ಅತ್ಯಾಚಾರ!

ದೆಹಲಿಯಲ್ಲಿ ಮಾತನಾಡಿರುವ ಕುಮಾರಸ್ವಾಮಿಯವರು ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಬಿಜೆಪಿಯವರು ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಿದ್ದಾರೆ ಅನ್ನೋದು ಗೊತ್ತು.. ಯಾರು ಆ ಪ್ರೀತಂಗೌಡ..? ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿ ಸರ್ವನಾಶ ಮಾಡಲು ಹೋದವನು.. ಅಂತವನನ್ನು ಕರೆಸಿ ಸಭೆ ಮಾಡುತ್ತಾರೆ. ಆ ಸಭೆಗೆ ನಾನು ಹೋಗಬೇಕಿತ್ತಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ..

ಇದನ್ನೂ ಓದಿ; ಚೀನಾದಲ್ಲಿ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌!; HUGಗೆ 11 ರೂಪಾಯಿ, KISSಗೆ 110 ರೂಪಾಯಿ!

ಇನ್ನು ಈ ಪಾದಯಾತ್ರೆಗೆ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ರಮೇಶ್‌ ಜಾರಕಿಹೊಳಿ ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ..

Share Post