Politics

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಸೋಲೋ ಸಾಧ್ಯತೆ ಇದೆಯಂತೆ ಹೌದಾ..?

ಬೆಂಗಳೂರು; ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ.. ಇದು ಬಿಜೆಪಿಯ ಭದ್ರಕೋಟೆ.. ಇಲ್ಲಿ ಬಿಜೆಪಿಯಿಂದ ಯಾರು ನಿಂತರೂ ಗೆದ್ದುಕೊಂಡು ಬರುತ್ತಾರೆ ಎಂಬ ನಂಬಿಕೆ.. ಹೀಗಾಗಿಯೇ ಕಾಂಗ್ರೆಸ್‌ ಸೇರಿ ಬೇರೆ ಯಾವುದೇ ಪಕ್ಷದವರು ಬಿಜೆಪಿ ವಿರುದ್ಧ ಕಣಕ್ಕಿಳಿಯಲು ಮುಂದೆ ನೋಡುತ್ತಾರೆ.. ಇದಕ್ಕೆ ಕಾರಣ ಕಳೆದ ನಾಲ್ಕು ದಶಕಗಳಿಂದಲೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ.. ಸತತವಾಗಿ ಏಳು ಬಾರಿ ಸಂಸದರಾಗಿ ಇದೇ ಕ್ಷೇತ್ರದಿಂದ ಅನಂತ್‌ಕುಮಾರ್‌ ಅವರು ಆಯ್ಕೆಯಾಗಿದ್ದರು.. ಅವರ ಮರಣಾನಂತರ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದಲ್ಲಿ ಸಂಸದರಾದರು.. ಈಗ ಎರಡನೇ ಬಾರಿ ತೇಜಸ್ವಿ ಸೂರ್ಯ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಬಿಜೆಪಿ ಅಭ್ಯರ್ಥಿ ಅನ್ನೋ ಕಾರಣಕ್ಕೆ ತೇಜಸ್ವಿ ಸೂರ್ಯ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ ಎಂಬುದು ಎಲ್ಲರ ನಂಬಿಕೆ.. ಆದ್ರೆ ಮತ್ತೊಂದು ಕಡೆ ಈ ಬಾರಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಮುಂದಿಡುತ್ತಿದ್ದಾರೆ..

ಬೆಂಗಳೂರು ದಕ್ಷಿಣ ಬಿಜೆಪಿ ಭದ್ರಕೋಟೆಯಾದ್ದರಿಂದ ಬಿಜೆಪಿಯವರು ಸೀರಿಯಸ್ಸಾಗಿ ಪ್ರಚಾರ ಮಾಡಲಿಲ್ಲ.. ಹೆಂಗೂ ಗೆಲ್ಲುತ್ತೇವೆ ಎಂದು ನೆಗ್ಲೆಕ್ಟ್‌ ಮಾಡಿದರು, ಇದನ್ನೇ ಬಂಡವಾಳ ಮಾಡಿಕೊಂಡ ಕಾಂಗ್ರೆಸ್‌ ಒಳಗೊಳಗೇ ಮತಗಳನ್ನು ಒಗ್ಗೂಡಿಸಿದೆ.. ಸಾಮಾನ್ನು ಜನರ ಮನೆಗಳ ಕದ ತಟ್ಟಿದೆ.. ಇದರಿಂದಾಗಿ ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲ್ಲೋ ಅವಕಾಶಗಳು ತುಂಬಾ ಇವೆ ಎಂದು ಕೆಲವರು ಹೇಳುತ್ತಿದ್ದಾರೆ.. ಈ ಬಾರಿ ರಾಮಲಿಂಗಾರೆಡ್ಡಿಯವರು ಪ್ರತಿಷ್ಠೆಯಾಗಿ ತೆಗೆದುಕೊಂಡು, ತಳ್ಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ, ಕಾಂಗ್ರೆಸ್‌ಗೆ ಮತಹಾಕುವ ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗ್ತಿದೆ..

ಇನ್ನು ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ಹಗರಣದ ವಿಚಾರವಾಗಿ ಬಿಜೆಪಿ ಪರವಾದ ಮತದಾರರಿಗೆ ಕೊಂಚ ಅಸಮಾಧಾನವಿದೆ.. ಇದನ್ನು ಸಂಸದ ತೇಜಸ್ವಿ ಸೂರ್ಯ ಮೇಲೆ ತೋರಿಸಿದ್ದಾರೆ.. ಕೆಲವರು ವಿರುದ್ಧವಾಗಿ ಮತ ಹಾಕಿದ್ದರೆ, ಕೆಲವರು ಮತದಾನವನ್ನೇ ಮಾಡಿಲ್ಲ ಎಂಬ ಮಾತುಗಳಿವೆ.. ಇನ್ನೊಂದೆಡೆ ಸಂಸದರಾಗಿ ತೇಜಸ್ವಿ ಸೂರ್ಯ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದೆಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದರು.. ಆದ್ರೆ ಹೇಳಿಕೊಳ್ಳುವ ರೀತಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಏನನ್ನೂ ಮಾಡಿಲ್ಲ.. ಈ ಹಿನ್ನೆಲೆಯಲ್ಲಿ ಬಹುತೇಕ ಜನಕ್ಕೆ ಈ ಬಗ್ಗೆ ಅಸಮಾಧಾನವಿದೆ.. ಆದ್ರೂ ಕೂಡಾ ಬಿಜೆಪಿ ಅಭ್ಯರ್ಥಿ ಎಂಬ ಕಾರಣಕ್ಕೆ ಮತ ಹಾಕಬೇಕು ಎಂದು ಹೇಳಿದವರು ಹಚ್ಚಿನ ಮಂದಿ ಇದ್ದರು.. ಇಂತಹವರ ಮನಸ್ಸನ್ನು ಕಾಂಗ್ರೆಸ್‌ ಅಭ್ಯರ್ಥಿ ಪರಿವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ..

ಇನ್ನೊಂದೆಡೆ ಕಾಂಗ್ರೆಸ್‌ ಶಾಸಕರಿರುವ ಗೋವಿಂದರಾಜನಗರ, ವಿಜಯನಗರ, ಬಿಟಿಎಂ ಲೇಔಟ್‌ ಮುಂತಾದ ಕಡೆ ಕಾಂಗ್ರೆಸ್‌ಗೆ ಒಳ್ಳೆಯ ಲೀಡ್‌ ಬರಲಿದೆ.. ಇದರಿಂದಾಗಿ ಸೌಮ್ಯಾರೆಡ್ಡಿಗೆ ಗೆಲುವಾಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ.. ಆದ್ರೆ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ. ಬಿಟಿಎಂ ಲೇಔಟ್‌, ಜಯನಗರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.. ಈ ಭಾಗದಲ್ಲಿ ಬಿಜೆಪಿಯನ್ನು ಅದರಲ್ಲೂ ಮೋದಿಯನ್ನು ಬೆಂಬಲಿಸುವವರು ಅಧಿಕವಾಗಿದ್ದಾರೆ.. ವಿಧಾನಸಭಾ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಮತ ಹಾಕಿದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೇ ಹೆಚ್ಚು ಮತ ಹಾಕುತ್ತಾರೆ.. ಹೀಗಾಗಿ ಗೆಲುವಿನ ಅಂತರ ಕಡಿಮೆಯಾಗಬಹುದಾಗಲೀ, ಗೆಲ್ಲೋದು ಬಿಜೆಪಿ ಅಭ್ಯರ್ಥಿಯೇ ಅನ್ನೋದು ಬಹುತೇಕರ ಮಾತು..

 

Share Post