ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆಲ್ಲೋದು ಇದೇ ಕ್ಷೇತ್ರಗಳಲ್ಲಾ..?; ಕ್ಷೇತ್ರವಾರು ಪಟ್ಟಿ ಇಲ್ಲಿದೆ..
ಬೆಂಗಳೂರು; ಇನ್ನೇನು ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲಿ ನಮಗೆ ಲೋಕಸಭಾ ಚುನಾವಣೆ ಫಲಿತಾಂಶ ಸಿಗುತ್ತಾ ಹೋಗುತ್ತದೆ.. ಅದಕ್ಕಾಗಿ ಇಡೀ ದೇಶ ಕಾಯುತ್ತಿದೆ.. ಹೀಗಿರುವಾಗಲೇ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.. ಅದ್ರಲ್ಲೂ ಕೂಡಾ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂಬ ಕುತೂಹಲ ಹೆಚ್ಚಾಗಿದೆ.. ಒಂದೆರಡು ಸಮೀಕ್ಷಗಳು ಕಾಂಗ್ರೆಸ್ ಡಬಲ್ ಡಿಜಿಟ್ ಸಾಧನೆ ಮಾಡುತ್ತದೆ ಎಂದು ಹೇಳುತ್ತಿವೆ.. ಆದ್ರೆ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ 5 ರಿಂದ 8 ಸ್ಥಾನ ಅಷ್ಟೇ ಸಿಗಬಹುದು ಎಂದು ಹೇಳಲಾಗುತ್ತಿದೆ..
ಇತ್ತ COPS Exit Poll ಪ್ರಕಾರ ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 11 ಸ್ಥಾನಗಳನ್ನು ಗಳಿಸಲಿದೆಯಂತೆ.. ಬಿಜೆಪಿ 15 ಹಾಗೂ ಅದರ ಮಿತ್ರಪಕ್ಷ ಜೆಡಿಎಸ್ 2 ಸ್ಥಾನಗಳನ್ನು ಗಳಿಸುತ್ತವಂತೆ.. ಇದರ ಜೊತೆಗೆ ಈ ಸಂಸ್ಥೆ ಯಾವ್ಯಾವ ಕ್ಷೇತ್ರವನ್ನು ಯಾರು ಗೆಲ್ಲಬಹುದು ಅನ್ನೋ ಲೆಕ್ಕಾಚಾರವನ್ನೂ ಮುಂದಿಟ್ಟಿದೆ..
COPS Exit Poll ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಪಕ್ಷ 1. ಚಾಮರಾಜನಗರ, 2. ಹಾಸನ, 3. ಚಿತ್ರದುರ್ಗ, 4. ಚಿಕ್ಕೋಡಿ, 5. ದಾವಣಗೆರೆ, 6. ಬೆಳಗಾವಿ, 7. ರಾಯಚೂರು, 8. ಬಳ್ಳಾರಿ, 9. ಬೀದರ್, 10. ಕಲಬುರಗಿ ಹಾಗೂ 11. ಕೊಪ್ಪಳ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ..
ಇನ್ನು ಇದೇ ಸಮೀಕ್ಷೆ ಪ್ರಕಾರ ಬಿಜೆಪಿ ಪಕ್ಷ 1. ಬೆಂಗಳೂರು ದಕ್ಷಿಣ, 2. ಬೆಂಗಳೂರು ಕೇಂದ್ರ, 3. ಬೆಂಗಳೂರು ಗ್ರಾಮೀಣ, 4. ಬೆಂಗಳೂರು ಉತ್ತರ, 5. ಮೈಸೂರು – ಕೊಡಗು, 6. ತುಮಕೂರು, 7. ಚಿಕ್ಕಬಳ್ಳಾಪುರ, 8. ಶಿವಮೊಗ್ಗ, 9. ದಕ್ಷಿಣ ಕನ್ನಡ, 10. ಹುಬ್ಬಳ್ಳಿ – ಧಾರವಾಡ, 11. ಉತ್ತರ ಕನ್ನಡ, 12. ಉಡುಪಿ – ಚಿಕ್ಕಮಗಳೂರು, 13. ಬಾಗಲಕೋಟೆ, 14. ಹಾವೇರಿ – ಗದಗ ಹಾಗೂ ವಿಜಯಪುರ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.. ಇನ್ನು ಜೆಡಿಎಸ್ ಪಕ್ಷ ಮಂಡ್ಯ ಹಾಗೂ ಕೋಲಾರದಲ್ಲಿ ಗೆಲ್ಲುತ್ತೆ ಅಂತ COPS Exit Poll ಸಮೀಕ್ಷೆ ಹೇಳುತ್ತಿದೆ..