BengaluruPolitics

ಪ್ರೋಟೋಕಾಲ್‌ ಉಲ್ಲಂಘಿಸಿತಾ ರಾಜ್ಯ ಸರ್ಕಾರ..?; ಡಿಕೆಶಿ ಸಮಜಾಯಿಷಿ ಏನು..?

ಬೆಂಗಳೂರು; ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಬಂದ ವೇಳೆ ಮೋದಿಯವರಿಗೆ ಸ್ವಾಗತ ಕೋರದೇ ರಾಜ್ಯ ಸರ್ಕಾರ ಪ್ರೋಟೋಕಾಲ್‌ ಉಲ್ಲಂಘನೆ ಮಾಡಿದೆ ಎಂದು ಆರ್‌.ಅಶೋಕ್‌ ಆರೋಪ ಮಾಡಿದ್ದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮಜಾಯಿಷಿ ನೀಡಿದ್ದಾರೆ. ಸದಾಶಿವನಗರದ ಅವರ ನಿವಾಸದಲ್ಲಿ ಮಾತನಾಡಿರುವ ಅವರು, ಪ್ರಧಾನಿ ಕಚೇರಿಯಿಂದಲೇ ಅಧಿಕೃತ ಪತ್ರ ಬಂದಿದ್ದು, ರಾಜ್ಯಪಾಲರು ಸೇರಿ ಯಾರೂ ಬರುವುದು ಬೇಡ ಎಂದು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ಸ್ವಾಗತಿಸಲು ಹೋಗಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಆರ್‌.ಅಶೋಕ್ ಅವರಿಗೆ ಸ್ವಲ್ಪ ಸಮಸ್ಯೆ ಇದೆ.  ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಚೇರಿ ಅಶೋಕ್‌ ಅವರನ್ನು ಎಷ್ಟು ದೂರ ಇಟ್ಟಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಯಾರಿಗೆ ಏನು ಗೌರವ ಕೊಡಬೇಕು ಅನ್ನೋದು ಬಿಜೆಪಿಯವರಿಗಿಂತ ನಮಗೇ ಚೆನ್ನಾಗಿ ಗೊತ್ತಿದೆ. ಪ್ರೋಟೋಕಾಲ್ ಪ್ರಕಾರ ಪ್ರಧಾನಿ ಮೋದಿಯವರನ್ನು ನಾವು ಸ್ವಾಗತ ಮಾಡೋದಕ್ಕೆ ಸಿದ್ದರಾಗಿದ್ದೆವು. ಆದರೆ ಪ್ರಧಾನಿ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರವಾಣಿ ಕರೆ ಬಂದಿತ್ತು. ನಾವು ಅದನ್ನು ಒಪ್ಪದೇ ಅಧಿಕೃತವಾಗಿ ಪತ್ರ ನೀಡಿ ಎಂದು ಮನವಿ ಮಾಡಿದ್ದೆವು. ನಂತರ ಪ್ರಧಾನಿ ಕಚೇರಿಯಿಂದ ಪತ್ರ ಬಂದಿದ್ದು, ಅದರಲ್ಲಿ ರಾಜ್ಯಪಾಲರು ಸೇರಿದಂತೆ ಯಾರೂ ಬರುವುದು ಬೇಡ ಎಂದು ತಿಳಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 

Share Post