HealthLifestyle

ಕೀಲು ನೋವು ಸಮಸ್ಯೆಗೆ ಇದಕ್ಕಿಂತ ಪರಿಹಾರ ಮತ್ತೊಂದಿಲ್ಲ!; ಈ ಪದಾರ್ಥಗಳನ್ನು ಉಪಯೋಗಿಸಿ ನೋವಿನಿಂದ ವಿಮುಖರಾಗಿ..

ಬ್ಯುಸಿ ಲೈಫ್‌, ಬದಲಾದ ಜೀವನಶೈಲಿಯಿಂದಾಗಿ ಜನರು ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.. ಅದರಲ್ಲಿ ಕೀಲು ನೋವು ಸಮಸ್ಯೆ ಕೂಡಾ ಒಂದು.. ಮೊದಮೊದಲು ವಯಸ್ಸಾದವರಿಗೆ ಈ ಕೀಲು ನೋವು ಕಾಣಿಸಿಕೊಳ್ಳುತ್ತಿತ್ತು.. ಆದ್ರೆ ವಯಸ್ಸಿಗೆ ಸಂಬಂಧವೇ ಇಲ್ಲದಂತೆ ಎಲ್ಲಾ ವಯೋಮಾನದವರಿಗೂ ಈಗ ಕೀಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.. ನಮ್ಮ ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.. ನಮ್ಮ ಆಹಾರದಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು.. ಅದರಿಂದಾಗಿ ಕೀಲು ನೋವು ಸಮಸ್ಯೆಯನ್ನು ದೂರ ಮಾಡಬಹುದು ಅಂತ ತಜ್ಞರು ಹೇಳುತ್ತಿದ್ದಾರೆ..

ಸಂಧಿವಾತ ಅಥವಾ ಕೀಲು ನೋವನ್ನು ನಿವಾರಣೆ ಮಾಡಬೇಕು ಅಂದ್ರೆ ಟೊಮೆಟೊ ನಮ್ಮ ಆಹಾರದ ಭಾಗಿವಾಗಿ ಇರಬೇಕು.. ಯಾಕಂದ್ರೆ ಟೊಮೆಟೊದಲ್ಲಿ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕ ಅಂಶವಿದ್ದು, ಇದು ಕೀಲು ನೋವು ಸಮಸ್ಯೆಯನ್ನು ನಿವಾರಿಸುತ್ತದೆ.. ಈ ಉತ್ಕರ್ಷಣ ನಿರೋಧಕವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.. ಇದಲ್ಲದೆ, ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಇರುತ್ತದೆ.. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ..

ಇನ್ನು ಅಡುಗೆಮನೆಯಲ್ಲಿ ಅರಿಶಿನದ ಮಹತ್ವ ಎಲ್ಲರಿಗೂ ಗೊತ್ತೇ ಇದೆ.. ಅರಿಶಿನವನ್ನು ಬಹುತೇಕ ಎಲ್ಲಾ ಆಹಾರಗಳಲ್ಲಿಯೂ ಬಳಸಲಾಗುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಸಂಯುಕ್ತವು ಶಕ್ತಿಯುತವಾದ ಉರಿಯೂತ ನಿವಾರಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅರಿಶಿನವನ್ನು ನಿಯಮಿತವಾಗಿ ಸೇವಿಸುವುದರಿಂದ ಕೀಲು ನೋವು, ಸಂಧಿವಾತ ಮತ್ತು ಸ್ನಾಯುಗಳ ಉರಿಯೂತದಂತಹ ಸಮಸ್ಯೆಗಳನ್ನು ನಿವಾರಿಸಬಹುದು.

ಲೆಟಿಸ್ ನಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಈ ಪೋಷಕಾಂಶಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಇನ್ನು ಅನಾನಸ್‌ನಲ್ಲಿರುವ ಬ್ರೊಮೆಲಿನ್ ಕಿಣ್ವವು ಉರಿಯೂತವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಬ್ರೋಮೆಲಿನ್ ಶಸ್ತ್ರಚಿಕಿತ್ಸೆಯ ನಂತರ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಸಾಲ್ಮನ್ ಮತ್ತು ಟ್ಯೂನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಈ ಒಮೆಗಾ-3 ಕೊಬ್ಬಿನಾಮ್ಲಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Share Post