ಅಗತ್ಯ ಇದ್ದರೆ ಕುಮಾರಸ್ವಾಮಿ ಬಂಧನವಾಗುತ್ತೆ; ಸಿದ್ದರಾಮಯ್ಯ
ಕೊಪ್ಪಳ; ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಬಂಧಿಸಬೇಕಾದ ಅಗತ್ಯತೆ ಬಿದ್ದರೆ ಯಾವುದೇ ಮುಲಾಜು ನೋಡದೇ ಅರೆಸ್ಟ್ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಕೊಪ್ಪಳದ ಬಸಾಪುರ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ..
ಇದನ್ನೂ ಓದಿ; ಪತ್ನಿ ಸಾವು, ಕೆರೆಗೆ ಹಾರಿದ ಪತಿ!; ಪತಿಯ ಮನೆಗೆ ಬೆಂಕಿ!
ಕುಮಾರಸ್ವಾಮಿಯವರ ವಿರುದ್ಧ ಪ್ರಕರಣದ ಬಗ್ಗೆ ಈಗಾಗಲೇ ಎಸ್‌ಐಟಿ ಹಾಗೂ ಲೋಕಾಯುಕ್ತ ಸಂಸ್ಥೆಗಳು ತನಿಖೆ ಮಾಡಿವೆ.. ಹೀಗಾಗಿ ಸದ್ಯ ಕುಮಾರಸ್ವಾಮಿಯವರ ಬಂಧಿಸುವ ಸನ್ನಿವೇಶ ಇಲ್ಲ.. ಹೆಚ್ಡಿಕೆ ವಿರುದ್ಧ ಸಾಕಷ್ಟು ದಾಖಲೆಗಳು ಸಿಕ್ಕಿವೆ.. ಹೀಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಲೋಕಾಯುಕ್ತ ಸಂಸ್ಥೆ ಕೋರಿದೆ.. ಇದರಿಂದ ಕುಮಾರಸ್ವಾಮಿಯವರಿಗೆ ಭಯ ಬಂದಿದ್ದು, ಏನೇನೋ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ..
ಇದನ್ನೂ ಓದಿ; ಆಟಿಕೆ ಎಂದು ಹಾವನ್ನು ಕಚ್ಚಿ ಸಾಯಿಸಿದ ಪುಟ್ಟ ಮಗು!
ನನ್ನ ವಿರುದ್ಧ ಯಾವುದೇ ತನಿಖಾ ಸಂಸ್ಥೆ ದಾಖಲೆ ಸಲ್ಲಿಸಿಲ್ಲ.. ಟಿ.ಜೆ.ಅಬ್ರಹಾಂ ನೀಡಿದ ಖಾಸಗಿ ದೂರಿನ ಮೇರೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ.. ಇದುವರೆಗೂ ನನ್ನ ವಿರುದ್ಧ ಯಾವುದೇ ತನಿಖೆಯೇ ನಡೆದಿಲ್ಲ.. ಪೊಲೀಸರು ಕೂಡಾ ನನ್ನ ವಿರುದ್ಧ ತನಿಖೆಗೆ ಅವಕಾಶ ಕೂಡಾ ಕೇಳಿಲ್ಲ.. ಆದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ತಾರತಮ್ಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ..